ಹೊನ್ನಾವರದ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಅಪರ ಸರ್ಕಾರಿ ವಕೀಲರ ಹುದ್ದೆ ಖಾಲಿಯಿದ್ದು, ಯೋಗ್ಯ ನ್ಯಾಯವಾದಿಗಾಗಿ ಹುಡುಕಾಟ ನಡೆದಿದೆ.
ಏಳು ವರ್ಷಗಳ ಕಾಲ ವಕೀಲ ವೃತ್ತಿ ಪೂರೈಸಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿಯ ಜೊತೆ ವಕೀಲ ವೃತ್ತಿ ಕೈಗೊಳ್ಳುವ ಬಗ್ಗೆ ಸಂಬoಧಿಸಿದ ಪ್ರಾಧಿಕಾರ ನೀಡಿದ ಸನ್ನದು ದೃಢೀಕೃತ ಪ್ರತಿ, ವಿಳಾಸ ದೃಢೀಕರಿಸುವ ಬಗ್ಗೆ ದೃಢೀಕೃತ ಪ್ರತಿ, ಆಧಾರ್ ಪ್ರತಿ, ಪಾಸ್ ಪೋರ್ಟ್ ಅಳತೆಯ ಫೊಟೋ ಸಲ್ಲಿಸುವುದು ಕಡ್ಡಾಯ.
ಹುದ್ದೆಗೆ ಯೋಗ್ಯ ಅಭ್ಯರ್ಥಿ ಆಯ್ಕೆ ಮಾಡುವ ಅಧಿಕಾರ ಜಿಲ್ಲಾಧಿಕಾರಿಗಳದ್ದಾಗಿದ್ದು, ಅಗಸ್ಟ 26 ಅರ್ಜಿ ಸಲ್ಲಿಕೆಗೆ ಕೊನೆ ದಿನ. ಸೂಚಿಸಿದ ದಿನದ ಒಳಗೆ ಕಾರವಾರದ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಕೆಯಾಗಬೇಕು. ಅವಧಿ ನಂತರ ಬರುವ ಅರ್ಜಿಗಳಿಗೆ ಇಲ್ಲಿ ಮಾನ್ಯತೆ ಕೊಡುವುದಿಲ್ಲ.
