ಕಾರವಾರದ ದಿವೇಕರ್ ಕಾಲೇಜು ಎದುರು ಗುರುವಾರನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸದಾಶಿವಗಡದಿAದ ಕಾರವಾರದ ಕಡೆ ಬುಲೇರೋ ಸಂಚರಿಸುತ್ತಿತ್ತು. ಆ ಬುಲೋರೋ ಎದುರಿಗೆ ಹೋಗುತ್ತಿದ್ದ ಬೈಕಿಗೆ ಡಿಕ್ಕಿಯಾಯಿತು. ಆ ಬೈಕು ಮುಂದಿದ್ದ ಬಸ್ಸಿಗೆ ಗುದ್ದಿತು. ಪರಿಣಾಮ ಬೈಕ್ ಓಡಿಸುತ್ತಿದ್ದ ಮೈಕಲ್ ನರೋನಾ (42) ಎಂಬಾತರು ಅಪಘಾತದಲ್ಲಿ ಸಾವನಪ್ಪಿದರು.
ಮೈಕಲ್ ನರೋನಾ ಅವರ ಜೊತೆ ಆ ಬೈಕಿನಲ್ಲಿ ಅರುಣ ನಾಯ್ಕ ಎಂಬಾತರು ಇದ್ದರು. ಡಿಕ್ಕಿ ರಭಸಕ್ಕೆ ಅರುಣ ನಾಯ್ಕ ಅವರು ಹೆದ್ದಾರಿಗೆ ಬಿದ್ದರು. ಈ ಅವಘಡದಲ್ಲಿ ಅರುಣ ನಾಯ್ಕ ಅವರಿಗೂ ಸಾಕಷ್ಟು ಪ್ರಮಾಣದಲ್ಲಿ ಪೆಟ್ಟಾಗಿದೆ.
ಅವಘಡದ ಬಗ್ಗೆ ಮಾಹಿತಿಪಡೆದ ಸಂಚಾರಿ ಠಾಣೆ ಪೊಲೀಸರು ಸ್ಥಳ ಭೇಟಿ ನಡೆಸಿದ್ದಾರೆ. ಅಪಘಾತದಿಂದ ಇನ್ನಿತರ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಪೊಲೀಸರು ಅದನ್ನು ನಿಯಂತ್ರಿಸಿದ್ದಾರೆ.
`ಅವಸರವೇ ಅಪಘಾತಕ್ಕೆ ಕಾರಣ. ನಿಮ್ಮ ವಾಹನ ನಿಮ್ಮ ನಿಯಂತ್ರಣದಲ್ಲಿರಲಿ’
