ಅಂಕೋಲಾದ ರಾಮನಗುಳಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನಿಗೆ ಅಪರಿಚಿತ ವಾಹನ ಬಡಿದ ಅಪರಿಚಿತನ ದೇಹ ಚೂರು ಚೂರಾಗಿದೆ. ರಾಮನಗುಳಿ ದುಗ್ಗನಬೈಲಿನ ಹೆದ್ದಾರಿಯಲ್ಲಿ ಈ ಅವಘಡ ನಡೆದಿದೆ
ಅಂದಾಜು 70 ವರ್ಷದ ಪುರುಷ ಪಾದಚಾರಿ ಸಾವನಪ್ಪಿದ್ದು, ಅವರ ವಾರಸುದಾರರಿಗಾಗಿ ಹುಡುಕಾಟ ನಡೆದಿದೆ. ಗುರುವಾರ ಬೆಳಗಿನ ಜಾವ 3 ಗಂಟೆಯಿoದ 6 ಗಂಟೆಯ ಅವಧಿಯಲ್ಲಿ ಪಾದಚಾರಿ ಅಂಕೋಲಾ ತಾಲೂಕಿನ ದುಗ್ಗನಬೈಲಿನ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ವಾಹನ ಬಡಿದಿದೆ. ಅಪಘಾತದ ವೇಳೆ ಕತ್ತಲು ಇದ್ದಿದ್ದರಿಂದ ಆ ಬಗ್ಗೆ ಯಾರಿಗೂ ಗಮನಕ್ಕೆ ಬರಲಿಲ್ಲ. ವಾಹನ ಸವಾರನ ಅತಿ ವೇಗ ಹಾಗೂ ಅಜಾಗರುಕತೆಯೇ ಈ ಅಪಘಾತಕ್ಕೆ ಕಾರಣ.
ಅಪಘಾತದ ನಂತರ ಅಪರಿಚಿತ ವಾಹನ ಸ್ಥಳದಲ್ಲಿ ನಿಂತಿಲ್ಲ. ರಸ್ತೆ ಮೇಲೆ ಬಿದ್ದ ಪುರಷ ಪಾದಚಾರಿ ಮೇಲೆ ಇನ್ನಷ್ಟು ವಾಹನ ಹತ್ತಿ ಹೋಗಿದ್ದು, ಅದರ ಪರಿಣಾಮ ದೇಹ ಚೂರು ಚೂರಾಗಿದೆ. ರಾಮನಗುಳಿಯ ಚಾಲಕ ಗೌರೀಶ ನಾಯಕ ಅವರು ನೀಡಿದ ಮಾಹಿತಿ ಪ್ರಕಾರ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
