`ಸ್ವಾತಂತ್ರ‍್ಯ ಉತ್ಸವ ಎಂದರೆ ಕೇವಲ ಆಚರಣೆಯಲ್ಲ. ಅದು ಸ್ವಾತಂತ್ರ‍್ಯ ಹಿಂದಿರುವ ಲಕ್ಷಾಂತರ ದೇಶಪ್ರೇಮಿಗಳ ತ್ಯಾಗ-ಬಲಿದಾನವನ್ನು ಸ್ಮರಿಸುವ ದಿನ’ ಎಂದು ಕಾರವಾರ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿಜಯ ಬಿಲಿಯೆ ಹೇಳಿದ್ದಾರೆ.
ಗುತ್ತಿಗೆದಾರರ ಕಚೇರಿಯ ಆವರಣದಲ್ಲಿ 79ನೇ ಸ್ವಾತಂತ್ರ‍್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ, ಅಸಹಕಾರ ಚಳುವಳಿಯನ್ನು ನೆನಪು ಮಾಡಿದರು. `ಭಾರತವನ್ನು ಬ್ರಿಟಿಷರಿಂದ ದಾಸ್ಯಮುಕ್ತಗೊಳಿಸಲು ಪ್ರಮುಖ ಕಾರಣ ಹೋರಾಟ. ಹಿಂಸೆಯ ಮಾರ್ಗ ಅನುಸರಿಸದೇ ಅಹಿಂಸಾ ಚಳುವಳಿಯ ಮೂಲಕವೇ ಬ್ರಿಟಿಷರನ್ನು ಭಾರತದಿಂದ ಓಡಿಸಿ, ಸ್ವಾತಂತ್ರ‍್ಯ ಪಡೆದ ಹೆಗ್ಗಳಿಕೆ ಗಾಂಧೀಜಿಯವರದ್ದಾಗಿದೆ’ ಎಂದು ಸ್ಮರಿಸಿದರು.
`ನಮ್ಮ ನಾಡಿನಲ್ಲಿ ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮನಂತವರು ಬ್ರಿಟಿಷರ ವಿರುದ್ಧ ಹೋರಾಡಿ, ಇಂದಿಗೂ ಅವರ ಧೈರ್ಯ- ಸ್ಥೈರ್ಯ ಇಂದಿನ ಜನಾಂಗಕ್ಕೆ ಮಾದರಿಯಾಗಿವೆ. ಹೀಗೆ ಲಕ್ಷಾಂತರ ಹೋರಾಟಗಾರರ ಪ್ರಾಣತ್ಯಾಗದ ಫಲವಾಗಿ ಪಡೆದಿದ್ದು ಸ್ವಾತಂತ್ರ‍್ಯ. ಈ ಸ್ವಾತಂತ್ರ‍್ಯವನ್ನು ಕಾಪಾಡಿಕೊಂಡು ಹೋಗಬೇಕಾದುದು ಮತ್ತು ಅದರ ಹಿಂದಿನ ಇತಿಹಾಸವನ್ನು ಎಂದಿಗೂ ಮರೆಯದೆ ಸ್ಮರಿಸುವುದು ಭಾರತೀಯರಾದ ನಮ್ಮ ಆದ್ಯ ಕರ್ತವ್ಯ’ ಎಂದರು.
`ಸ್ವಾತAತ್ರ‍್ಯಕ್ಕೆ ಕಾರಣ ಅಂದು ಇದ್ದ ಒಗ್ಗಟ್ಟು ನಮ್ಮಲಿಯೂ ಇರಬೇಕು. ಗುತ್ತಿಗೆದಾರರು ಕೂಡ ನಮ್ಮ ಸಂಘಟನೆಯ ಹಿತದೃಷ್ಟಿಯಿಂದ ಒಗ್ಗಟ್ಟಾಗಿರಬೇಕು. ಒಡಕು ಮೂಡಿಸುವವರಿಂದ ಅಂತರ ಕಾಯ್ದಿಕೊಳ್ಳಬೇಕು’ ಎಂದು ಸಂಘದ ನಿಕಟಪೂರ್ವ ಅಧ್ಯಕ್ಷರಾದ ಮಾಧವ ನಾಯಕ ಅವರು ಕರೆ ನೀಡಿದರು. ಸಂಘದ ಉಪಾಧ್ಯಕ್ಷರಾದ ಛತ್ರಪತಿ ಮ್ಹಾಲ್ಸೇಕರ್, ಪ್ರೀತಮ್ ಮಸೂರ್ಕರ್, ಸಹ ಕಾರ್ಯದರ್ಶಿ ಸಂತೋಷ ಸೈಲ್, ಖಜಾಂಚಿ ಸತೀಶ ವಿಠೋಬಾ ನಾಯ್ಕ, ಶಶಿಕಾಂತ ನಾಯ್ಕ, ಸುನಿಲ್ ಸೈಲ್, ಜಗದೀಶ ಕೆ ನಾಯ್ಕ, ರೋಹಿದಾಸ್ ವಿ ಕೋಠಾರ್ಕರ್, ದತ್ತ ಎಂ ಗುಣಗಿ, ಭೋಜರಾಜ್ ದ್ವಾರಸ್ವಾಮಿ, ಉದಯ ವಿ ನಾಯ್ಕ, ವಾಶಿ, ಕೃಷ್ಣಾನಂದ ನಾಯ್ಕ, ರಾಮನಾಥ ನಾಯ್ಕ, ರವೀಂದ್ರ ಕೇರಕರ್, ಮನೋಜ್ ನಾಯ್ಕ, ಸೋಮನಾಥ ಪಾರುಲೆಕರ, ಅನಿಲ್ ಮಲ್ಸೇಕರ್, ರೂಪೇಶ್ ನಾಯ್ಕ ಇದ್ದರು.
