ಕಾರವಾರ ಕಡಲತೀರದಲ್ಲಿ ಜಿಂಕೆಯೊoದರ ಶವ ಸಿಕ್ಕಿದೆ. ಕಾಡು ಪ್ರಾಣಿ ಕಡಲಿಗೆ ಬಂದು ಸಾವನಪ್ಪಿದ್ದು ಹೇಗೆ? ಎನ್ನುವ ಬಗ್ಗೆ ಯಾರಿಗೂ ಮಾಹಿತಿ ಇಲ್ಲ.
ಶುಕ್ರವಾರ ಕಾರವಾರದ ರಾಕ್ ಗಾರ್ಡನ್ ಬಳಿ ಜಿಂಕೆಯ ಶವ ನೋಡಿದ ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯವರು ಪರಿಶೀಲಿಸಿ ಸಾವನಪ್ಪಿದ ಜೀವಿಯ ಮರಣೋತ್ತರ ಪರೀಕ್ಷೆ ಮಾಡಿದ್ದಾರೆ. ಅಂದಾಜು 6 ವರ್ಷದ ಜಿಂಕೆ ಇದಾಗಿದ್ದು, ಮೃತದೇಹದ ಒಳಗೆ ನೀರು ತುಂಬಿದೆ.
ಬೈತಖೋಲ್ ಬಳಿ ಅರಣ್ಯ ಪ್ರದೇಶವಿದ್ದು, ಅಲ್ಲಿಂದಲೇ ಚಿಂಕೆ ಸಮುದ್ರಕ್ಕೆ ಬಿದ್ದಿರುವ ಬಗ್ಗೆ ಅಂದಾಜಿಸಲಾಗಿದೆ. ಎರಡು ದಿನದ ಹಿಂದೆಯೇ ಜಿಂಕೆ ಸಾವನಪ್ಪಿರುವ ಅನುಮಾನಗಳಿವೆ. ಜಿಂಕೆ ಶವ ಕಡಲಿಗೆ ಬಂದಾಗ ಬೀದಿ ನಾಯಿಗಳು ಅಲ್ಲಿಗೆ ಬಂದಿದ್ದು, ಜನ ನಾಯಿಗಳನ್ನು ಓಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಅರಣ್ಯ ಸಿಬ್ಬಂದಿ ಜಿಂಕೆಯನ್ನು ಮಣ್ಣು ಮಾಡಲಿದ್ದಾರೆ.
Discussion about this post