ಶಿರಸಿ ತಾಲೂಕಿನ ಸೋಂದಾ ಗ್ರಾಮದ ಕಮಾಟಗೇರಿಯಲ್ಲಿ ಕೊಲೆ ನಡೆದಿದೆ. ಕೂಲಿ ಕೆಲಸಕ್ಕೆ ಕರೆದೊಯ್ದು ಕೂಲಿ ಹಣ ಕೊಡದ ಶೇರುಗಾರನನ್ನು ಕಾರ್ಮಿಕ ಕೊಲೆ ಮಾಡಿದ್ದು, ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
ಕಮಾಟಗೇರಿಯ ರವೀಶ್ ಗಣಪತಿ ಚನ್ನಯ್ಯ (37) ಅವರು ಕೂಲಿ ಕಾರ್ಮಿಕರನ್ನು ತೋಟ-ಗದ್ದೆಗೆ ಕರೆದೊಯ್ದು ದುಡಿಸುತ್ತಿದ್ದರು. ತೋಟ-ಗದ್ದೆ ಮಾಲಕರಿಂದ ಹಣಪಡೆದು ಅದನ್ನು ಕಾರ್ಮಿಕರಿಗೆ ವಿತರಿಸುತ್ತಿದ್ದರು. ಅದೇ ಊರಿನ ಮಂಜುನಾಥ ಬಸಯ್ಯ ಚನ್ನಯ್ಯ (55) ಅವರು ರವೀಶ ಅವರು ಹೇಳಿದ ಕಡೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.
ಗುರುವಾರ ರಾತ್ರಿ ಕೂಲಿ ಹಣ ಕೇಳುವುದಕ್ಕಾಗಿ ಮಂಜುನಾಥ ಅವರು ರವೀಶ ಅವರ ಮನೆಗೆ ಬಂದಿದ್ದರು. ಕೂಲಿ ಹಣದ ವಿಷಯವಾಗಿ ಅವರಿಬ್ಬರ ನಡುವೆ ಜಗಳ ನಡೆದಿತ್ತು. ಆಗಾಗ ಅವರಿಬ್ಬರ ನಡುವೆ ಜಗಳ ಸಾಮಾನ್ಯವಾಗಿದ್ದರಿಂದ ರವೀಶ ಮನೆಯಲ್ಲಿದ್ದವರು ಹೆಚ್ಚಿಗೆ ತಲೆಕೆಡಿಸಿಕೊಂಡಿರಲಿಲ್ಲ. ರವೀಶ ಅವರು ಎಂದಿನoತೆ ಮಂಜುನಾಥ ಅವರನ್ನು ಸಮಾಧಾನ ಮಾಡಿ ಕಳುಹಿಸುತ್ತಾರೆ ಎಂದು ಎಲ್ಲರು ಭಾವಿಸಿದ್ದರು.
ಆದರೆ, ಶುಕ್ರವಾರ ಬೆಳಗ್ಗೆ 6.30ಕ್ಕೆ ರವೀಶ ಅವರು ಮನೆ ಅಂಗಳದಲ್ಲಿ ಶವವಾಗಿ ಬಿದ್ದಿದ್ದರು. ಗುರುವಾರ ರಾತ್ರಿ ನಡೆದ ಕಾಳಗದಲ್ಲಿ ರವೀಶ ಅವರ ಕೊಲೆಯಾಗಿದ್ದು ರವೀಶ ಅವರ ಪತ್ನಿ ಚೇತನಾ ಅವರಿಗೆ ಆ ವೇಳೆಯಲ್ಲಿಯೇ ಗಮನಕ್ಕೆ ಬಂದಿತು. ಮಂಜುನಾಥ ಅವರು ಹರಿದವಾದ ಆಯುದದಿಂದ ಹೊಡೆದು ರವೀಶ ಅವರ ಕೊಲೆ ಮಾಡಿದ ಬಗ್ಗೆ ಚೇತನಾ ಅವರು ಪೊಲೀಸ್ ದೂರು ನೀಡಿದ್ದಾರೆ.
`ಯಾವುದೇ ವಿಷಯವಾದರೂ ತಾಳ್ಮೆಯಿಂದ ವ್ಯವಹರಿಸಿ. ದುಡುಕಿನ ನಿರ್ಧಾರ ಬದುಕಿಗೆ ಮಾರಕ’
Discussion about this post