ಶಿರಸಿಯ ಶಿರಗುಣಿಯಲ್ಲಿ ಚಿರತೆ ಸಂಚಾರ ಶುರುವಾಗಿದೆ. ಅಲ್ಲಿನ ಭಟ್ಟರ ಮನೆ ಅಂಗಳಕ್ಕೆ ಪ್ರವೇಶಿಸಿದ್ದ ಚಿರತೆ ಮಾಂಸ ಸಿಗದೇ ಮರಳಿದೆ.
ಶಿರಗುಣಿಯ ವಿ ಎಸ್ ಭಟ್ಟ ಮನೆಯ ನಾಯಿ ಗುರುವಾರ ರಾತ್ರಿ ಜೋರಾಗಿ ಬೊಗಳುತ್ತಿತ್ತು. ಆ ರೀತಿ ನಾಯಿ ಬೊಗಳಿದ್ದನ್ನು ಮನೆಯವರು ಎಂದಿಗೂ ನೋಡಿರಲಿಲ್ಲ. ಹೀಗಾಗಿ ಮನೆಯವರು ಮನೆಯಿಂದ ರಾತ್ರಿ ಹೊರ ಬಂದು ಹುಡುಕಾಟ ನಡೆಸಿದ್ದು, ಆ ವೇಳೆ ಅವರಿಗೆ ಅಲ್ಲಿ ಯಾವ ಸಮಸ್ಯೆಯೂ ಕಾಣಲಿಲ್ಲ.
ಮರುದಿನ ಮನೆಗೆ ಅಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಅಲ್ಲಿ ಚಿರತೆ ಓಡಾಡುತ್ತಿರುವುದು ಗಮನಕ್ಕೆ ಬಂದಿದೆ. ಆಗ, ನಾಯಿ ಚಿರತೆಯನ್ನು ನೋಡಿ ಬೊಗಳಿರುವುದು ಗೊತ್ತಾಗಿದೆ. ಮನೆ ಅಂಗಳ-ಚಿಟ್ಟೆ ಮೇಲೆಯೂ ಚಿರತೆ ಓಡಾಡಿದೆ. ಆದರೆ, ಅಲ್ಲಿರುವ ನಾಯಿಯನ್ನು ಭಕ್ಷಿಸಲು ಚಿರತೆಗೆ ಆ ದಿನ ಸಾಧ್ಯವಾಗಿಲ್ಲ.
ನಾಯಿ ಜೋರಾಗಿ ಬೊಬ್ಬೆ ಹೊಡೆದಾಗ ಮನೆಯವರು ಬಾಗಿಲು ತೆರೆದಿದ್ದು, ಭಟ್ಟರು ಬರುವ ಮುನ್ಸೂಚನೆ ಸಿಕ್ಕಿ ಚಿರತೆ ಅಲ್ಲಿಂದ ಓಡಿ ಪರಾರಿಯಾಗಿದೆ. `ಇದೇ ಮೊದಲ ಬಾರಿಗೆ ಚಿರತೆ ಮನೆ ಅಂಗಳದಲ್ಲಿ ಕಾಣಿಸಿಕೊಂಡಿದೆ. ವನ್ಯಜೀವಿ ಹಾವಳಿಯಿಂದ ಜೀವ ಹಾನಿ ಆಗುವುದನ್ನು ತಪ್ಪಿಸಬೇಕು’ ಎಂದು ಕುಟುಂಬದವರು ಹೇಳಿದ್ದಾರೆ.
ಮನೆ ಅಂಗಳಕ್ಕೆ ಚಿರತೆ ಬಂದಿದ್ದ ವಿಡಿಯೋ ಇಲ್ಲಿ ನೋಡಿ..
Discussion about this post