ಪತ್ನಿ ಸಾವನಪ್ಪಿದನ್ನು ಅರಗಿಸಿಕೊಳ್ಳಲಾಗದ ಭಟ್ಕಳದ ಮೇಸ್ತ್ರಿ ಮಂಜುನಾಥ ನಾಯ್ಕ ಅವರು ಅದೇ ನೋವಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಲ್ಲಿನ ಅರಣ್ಯ ಪ್ರದೇಶದಲ್ಲಿ ಮಂಜುನಾಥ ನಾಯ್ಕ ಅವರ ಶವ ಸಿಕ್ಕಿದೆ.
ಭಟ್ಕಳದ ಹೆಬಳೆಯ ಹೊನಗದ್ದೆಯಲ್ಲಿ ಮಂಜುನಾಥ ನಾಯ್ಕ ಅವರು ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದರು. ಈಚೆಗೆ ಅವರ ಪತ್ನಿ ಸಾವನಪ್ಪಿದ್ದು, ಅದಾದ ನಂತರ ಮಂಕಾಗಿದ್ದರು. ಪತ್ನಿ ಸಾವಿನ ನಂತರ ಮಂಜುನಾಥ ನಾಯ್ಕ ಅವರು ಯಾರ ಜೊತೆಯೂ ಮೊದಲಿನಂತೆ ಬೆರೆಯುತ್ತಿರಲಿಲ್ಲ. ತಮ್ಮ ನೋವನ್ನು ತೋಡಿಕೊಂಡಿರಲಿಲ್ಲ.
ಅಗಸ್ಟ 15ರಂದು ಮನೆಯಿಂದ ಹೊರ ಹೋದ ಮಂಜುನಾಥ ನಾಯ್ಕ ಅವರು ಮರಳಿ ಬರಲಿಲ್ಲ. ಮನೆ ಸಮೀಪದ ಅರಣ್ಯ ಪ್ರದೇಶದಲ್ಲಿದ್ದ ಅಕೇಶಿಯಾ ಗಿಡಕ್ಕೆ ಅವರು ನೇಣು ಹಾಕಿಕೊಂಡಿದ್ದರು. ಇದನ್ನು ನೋಡಿದ ಅವರ ಮಗ ಪಾಂಡುರAಗ ನಾಯ್ಕ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.
Discussion about this post