`ಉತ್ತರ ಕನ್ನಡ ಕನ್ನಡ ಜಿಲ್ಲೆಯಲ್ಲಿ ಯಾವುದೇ ಯೋಜನೆ ಅನುಷ್ಠಾನಕ್ಕೂ ಮುನ್ನ ಇಲ್ಲಿನ ಧಾರಣಾ ಶಕ್ತಿ ಅಧ್ಯಯನ ನಡೆಸಬೇಕು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
`ಈಗಾಗಲೇ ಅನೇಕ ಯೋಜನೆಗಳು ಜಿಲ್ಲೆಯಲ್ಲಿ ಅನುಷ್ಠಾನವಾಗಿದೆ. ಇನ್ನೂ ಹೊಸ ಹೊಸ ಯೋಜನೆಗಳನ್ನು ತರುವ ಮುನ್ನ ಆ ಬಗ್ಗೆ ಸಮಗ್ರ ಅಧ್ಯಯನ ನಡೆಯಬೇಕು’ ಎಂದವರು ಆಗ್ರಹಿಸಿದ್ದಾರೆ. `ಸಾಕಷ್ಟು ಯೋಜನೆ ಬಂದರೂ ಇಲ್ಲಿನವರಿಗೆ ಉದ್ಯೋಗ ಸಿಕ್ಕಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯೂ ಆಗಿಲ್ಲ. ನಮ್ಮ ಜಿಲ್ಲೆ ಹಾಗೂ ಜನರಿಗೆ ತೊಂದರೆ ಕೊಡುವ ಯೋಜನೆ ಬೇಡವೇ ಬೇಡ’ ಎಂದವರು ಹೇಳಿದ್ದಾರೆ.
`ಕಳಚೆ, ಶಿರೂರು ಗುಡ್ಡ ಕುಸಿತವನ್ನು ನಾವು ನೋಡಿದ್ದೇವೆ. ಅನಾಹುತ ಆಗುವ ಮುನ್ನ ತಡೆಯುವುದಕ್ಕಾಗಿ ಸೂಕ್ತ ಅಧ್ಯಯನ ಅಗತ್ಯ’ ಎಂದವರು ಹೇಳಿದ್ದಾರೆ. `ವಿವಿಧ ಯೋಜನೆಗಳಿಗೆ ತ್ಯಾಗ ಮಾಡಿದ ಜಿಲ್ಲೆಗೆ ರಾಜ್ಯ ಸರ್ಕಾರ ವಿಶೇಷ ಅನುದಾನ ಕೊಡಬೇಕು. ಬೇರೆ ಬೇರೆ ಜಿಲ್ಲೆಗಳ ಮಾದರಿಯಲ್ಲಿ ಇಲ್ಲಿಗೂ ಅನುದಾನ ಸಿಗಬೇಕು’ ಎಂದು ಹೇಳಿದ್ದಾರೆ.
Discussion about this post