ಶ್ರೀಕ್ಷೇತ್ರ ಗೋಕರ್ಣದಲ್ಲಿ ತಲತಲಾಂತರದಿoದ `ದಧಿ ಉತ್ಸವ’ ಎಂಬ ಆಚರಣೆ ನಡೆಯುತ್ತಿದೆ. ಮೊಸರು ಗಡಿಗೆ ಒಡೆಯುವುದು ಈ ಉತ್ಸವದ ವಿಶೇಷ!
ಭಗವಾನ್ ಶ್ರೀಕೃಷ್ಣನ ಬಾಲ್ಯದ ತುಂಟಾಟಗಳನ್ನು ನೆನಪಿಸುವುದಕ್ಕಾಗಿ ಗೋಕರ್ಣದಲ್ಲಿ ಪ್ರತಿ ವರ್ಷ ಮೊಸರಿನ ಗಡಿಗೆ ಒಡೆಯುವ ಉತ್ಸವ ಆಚರಿಸಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಈ ಉತ್ಸವ ನಡೆಯಲಿದ್ದು, ಚಿಕ್ಕ ಮಕ್ಕಳಿಂದಹಿಡಿದು ವೃದ್ಧವರೆಗೂ ಎಲ್ಲರೂ ಉತ್ಸಾಹದಿಂದ ಈ ಉತ್ಸವಲ್ಲಿ ಭಾಗವಹಿಸುತ್ತಾರೆ.
ಕೃಷ್ಣಾಷ್ಟಮಿ ಅಂಗವಾಗಿ ಕ್ಷೇತ್ರದಲ್ಲಿ ಬಗೆ ಬಗೆಯ ಪೂಜೆ-ಪುನಸ್ಕಾರಗಳು ನಡೆಯುತ್ತದೆ. ಅನೇಕರು ಕೃಷ್ಣನು ಬಾಲ್ಯದಲ್ಲಿ ಬೆಣ್ಣೆ ಕದ್ದ ಕಥೆಯನ್ನು ಮೊಮ್ಮಕ್ಕಳಿಗೆ ಹೇಳುತ್ತಾರೆ. ಮಾಬಲೇಶ್ವರ ಮಂದಿರದ `ದಧಿ ಶಿಕ್ಯೋತ್ಸವ’ದಲ್ಲಿ ಮಕ್ಕಳ ಜೊತೆ ಅಜ್ಜ-ಅಜ್ಜಿಯರು ಭಾಗವಹಿಸಿ ಖುಷಿಪಡುತ್ತಾರೆ.
ಶನಿವಾರ ಸಂಜೆ ಶ್ರೀಕ್ಷೇತ್ರದಲ್ಲಿ ಈ ಉತ್ಸವ ನಡೆದಿದ್ದು, ನೆರೆದಿದ್ದ ಭಕ್ತರು ಸಂಭ್ರಮಿಸಿದರು. ರಥಬೀದಿಯಿಂದ ಕೋಟಿತೀರ್ಥ ಕಟ್ಟೆಯಲ್ಲಿರುವ ಕೃಷ್ಣಾಪುರ – ಗೋಪಾಲಕೃಷ್ಣ ಮಂದಿರದವರೆಗೂ ವಾದ್ಯಗಳ ಮೆರವಣಿಗೆ ನಡೆಯಿತು. ಉತ್ಸವ ತೆರಳುವ ಮಾರ್ಗದ ನಿಗದಿತ ಸ್ಥಳದಲ್ಲಿ 19 ಮೊಸರು ಗಡಿಗೆ ಹಾಗೂ ತೆಂಗಿನ ಕಾಯಿಗಳನ್ನಿರಿಸಲಾಗಿದ್ದು, ಅದನ್ನು ಒಡೆಯಲಾಯಿತು.
ಗೋಪಾಲಕೃಷ್ಣ ಮಂದಿರದಲ್ಲಿ ಪೂಜೆ ನೆರವೇರಿದ ಬಳಿಕ ಉತ್ಸವ ವೆಂಕಟರಮಣ ದೇವಾಲಯದ ಮೂಲಕ ಶ್ರೀ ದೇವರ ಉತ್ಸವವು ಮರಳಿ ಬಂದಿತು. ಅರ್ಚಕರಾದ ಶ್ರೀನಾಗ ಶೇಷ ಅಡಿ ಮೂಳೆ ಪೂಜಾ ಕಾರ್ಯ ಮಾಡಿದರು. ಮೇಲುಸ್ತುವಾರಿ ಸಮಿತಿಯ ನೇತೃತ್ವದಲ್ಲಿ ನಡೆದ ದೈವಿಕ ಕಾರ್ಯದಲ್ಲಿ ಸಮಿತಿ ಸದಸ್ಯರು, ಅರ್ಚಕ ವೃಂದ ಹಾಗೂ ಊರಿನವರು ಭಾಗವಹಿಸಿದ್ದರು.
ದೇವಾಲಯದ ನಡೆದ ಈ ವರ್ಷದ ಮೊದಲ ಉತ್ಸವ ಇದಾಗಿದೆ. ಈ ಉತ್ಸವದ ನಂತರವೇ ವಿವಿಧ ಉತ್ಸವಗಳು ಶುರುವಾಗುತ್ತದೆ.
Discussion about this post