ಕೊರೊನಾ ಕಾರಣ ಸಾವನಪ್ಪಿದ್ದ ಯಲ್ಲಾಪುರದ ಕಾರ್ಮಿಕ ಶಿವರಾಮ ಕರುಮನಿ ಕುಟುಂಬಕ್ಕೆ ಕಾರ್ಮಿಕ ವಿಮಾ ನಿಗಮ ಪರಿಹಾರ ವಿತರಿಸಿದೆ. ದಾಂಡೇಲಿಯ ರಾಜ್ಯ ಕಾರ್ಮಿಕ ವಿಮಾ ನಿಗಮದ ಶಾಖೆಯಲ್ಲಿ ಅವರ ಕುಟುಂಬದವರು ಕೊರೊನಾ (Corona) ಪರಿಹಾರದ ಚೆಕ್ ಹಾಗೂ ಮಾಸಿಕ ಪಿಂಚಣಿ ಮಂಜೂರಾತಿ ಪತ್ರ ಪಡೆದರು.
2021ರಲ್ಲಿ ಕಾರ್ಮಿಕ ಶಿವರಾಮ ಕರುಮನಿ ಸಾವನಪ್ಪಿದ್ದರು. ಅವರು ಕೊರೊನಾ\’ದಿಂದ ( Corona ) ಸಾವನಪ್ಪಿರುವುದು ದೃಢವಾಗಿತ್ತು. ಈ ಹಿನ್ನಲೆ ಅವರ ಪತ್ನಿ ಗೀತಾ ಹಾಗೂ ಮಕ್ಕಳಾದ ವಿರಾಜ್ ಮತ್ತು ಅಂಶಿಕಾ ಅವರಿಗೆ ರಾಜ್ಯ ಕಾರ್ಮಿಕ ವಿಮಾ ನಿಗಮದಿಂದ 5,72,202ರೂ ಪರಿಹಾರದ ಮೊತ್ತ ಸಿಕ್ಕಿದೆ. ಪ್ರತಿ ತಿಂಗಳು 14800 ರೂ ಪಿಂಚಣಿ ದೊರೆಯುವ ಬಗ್ಗೆ ಆದೇಶ ಪ್ರತಿ ಸಿಕ್ಕಿದೆ.