ಜನರ ಸಮಸ್ಯೆ ಬಗ್ಗೆ ಜನಸಾಮಾನ್ಯರ ಸಮಾಜದಿಂದ ಮನವಿ
ಕುಮಟಾ: `ವಿವಿಧ ತಾಲೂಕುಗಳಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಕಂಪ್ಯೂಟರ್ ಸರಿಯಿಲ್ಲದ ಕಾರಣ ಜನ ತೊಂದರೆ ಅನುಭವಿಸುತ್ತಿದ್ದು, ಕಂಪ್ಯುಟರ್ ಜೊತೆ ವಿದ್ಯುತ್ ಉಪಕರಣಗಳನ್ನು ಸರಿಪಡಿಸಿ\’ ಎಂದು ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರವು ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಅವರಿಗೆ ಮನವಿ ಸಲ್ಲಿಸಿದೆ. Uttara kannada news
ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ್ ನೇತೃತ್ವದಲ್ಲಿ ಕೇಂದ್ರದ ಪ್ರಮುಖರು ಶನಿವಾರ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಅವರನ್ನು ಭೇಟಿ ಮಾ, ತಹಸೀಲ್ದಾರ್ ಕಚೇರಿಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಎಸಿ ಮುಖೇನ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದರು. Uttara kannada news
`ಸರ್ಕಾರಿ ಕಚೇರಿಗಳಲ್ಲಿ ಕಂಪ್ಯೂಟರ್, ಪ್ರಿಂಟರ್, ಯು.ಪಿ.ಎಸ್ ಸೇರಿ ಹಲವು ವಿದ್ಯುತ್ ಉಪಕರಣಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಕೇಳಿದರೆ ಕಳೆದ 8 ವರ್ಷದಿಂದ ಅನುದಾನ ಬಿಡುಗಡೆಯಾಗದಿರುವ ಬಗ್ಗೆ ಮಾಹಿತಿಯಿದ್ದು, ಜನರಿಗೆ ಸಮಸ್ಯೆಯಾಗಿದೆ\’ ಎಂದು ದೂರಿದರು.
ಹೆಚ್ಚುವರಿ ವಸೂಲಿ ಬಗ್ಗೆ ದೂರು:
`ಸರಿಯಾದ ಸಮಯಕ್ಕೆ ಆಹಾರ ನಿರೀಕ್ಷಕರು ಕೈಗೆ ಸಿಗುವುದಿಲ್ಲ. 3-4 ಕಡೆ ಪ್ರಭಾರಿಯಾಗಿ ನೇಮಿಸಿದ್ದರಿಂದ ತಾಲೂಕು ವ್ಯಾಪ್ತಿಯ ಗ್ರಾಮೀಣ ಭಾಗದ ಜನರು ತಮ್ಮ ಕೆಲಸ ಆಗದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ಪ್ರತಿಯೊಂದು ಕೆಲಸಕ್ಕೂ ಗ್ರಾಮ ಒನ್, ಕರ್ನಾಟಕ ಒನ್, ಸಿ.ಎಸ್.ಸಿ ಸೆಂಟರ್ಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಆದರೆ, ಈ ಸೇವಾ ಕೇಂದ್ರಗಳ ಕೆಲವರು 200 ರಿಂದ 300 ರೂ ಹೆಚ್ಚುವರಿ ಹಣ ಪಡೆಯುತ್ತಾರೆ\’ ಎಂದು ದೂರಿದರು.
`ಹೊರಗುತ್ತಿಗೆ ಆದಾರದ ಮೇಲೆ ಸಿಬ್ಬಂದಿಯನ್ನು ಸರಿಯಾಗಿ ನೇಮಿಸಿಲ್ಲ. ಕುಮಟಾ ಅಧಿಕಾರಿಯೊಬ್ಬರನ್ನು ಅಂಕೋಲಾ ಮತ್ತು ಕಾರವಾರಕ್ಕೆ ನೇಮಿಸಲಾಗಿದೆ. ಈ ಬಗ್ಗೆಯೂ ಹಲವು ಬಾರಿ ಇಲಾಖೆಯಿಂದ ಕಾರವಾರ ಉಪನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಆದರೂ ಏನೂ ಪ್ರಯೋಜನವಾಗಿಲ್ಲ. ಹೀಗಾಗಿ ಕೂಡಲೇ ಜಿಲ್ಲೆಯಲ್ಲಿ ಖಾಯಂ ಅಧಿಕಾರಿ ಹಾಗು ಸಿಬ್ಬಂದಿ ನೇಮಿಸಬೇಕು\’ ಎಂದು ಆಗ್ರಹಿಸಿದರು.
ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದದ ತ್ಯಾಗರಾಜ್ ಮುಕ್ರಿ, ಗಜಾನನ ಗುನಗ, ಮೂಜಿಬ್ ಶರೀಪ್ ಇತರರು ಇದ್ದರು.
S News ಡಿಜಿಟಲ್
ಮೀನು ಕಾರ್ಮಿಕರಿಂದ ಮಾನವೀಯ ಕಾರ್ಯ
ಹೊನ್ನಾವರ: ಶರಾವತಿ ನದಿಯಲ್ಲಿ ಮೀನುಗಾರಿಕೆ ನಡೆಸುವಾಗ ಸಾವನಪ್ಪಿದ ಪ್ರಜ್ವಲ್ ಮಾಬ್ಲ ಖಾರ್ವಿ ಕುಟುಂಬದ ನೋವು ಅರ್ಥ ಮಾಡಿಕೊಂಡ ಮೀನುಗಾರ ಕಾರ್ಮಿಕರು ಅವರ ಕುಟುಂಬಕ್ಕೆ ನೆರವು ನೀಡಿದರು.
ಕರಾವಳಿ ಮೀನುಗಾರರ ಕಾರ್ಮಿಕರ ಸಂಘದ ಕಚೇರಿಯಲ್ಲಿ ಸಂಘದಿ0ದ 15 ಸಾವಿರ ರೂ ಹಣವನ್ನು ಮೃತರ ಕುಟುಂಬದವರಿಗೆ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಸಂಘದ ಅಧ್ಯಕ್ಷ ರಾಜೇಶ ತಾಂಡೇಲ್, ಉಪಾಧ್ಯಕ್ಷ ರಮೇಶ ತಾಂಡೇಲ್ ಮತ್ತು ಕಾರ್ಯದರ್ಶಿ ರಾಜು ತಾಂಡೇಲ್ ಸದಸ್ಯ ಗಜಾನನ ಉಪಸ್ಥಿತರಿದ್ದರು.
S News ಡಿಜಿಟಲ್
ಶೃದ್ಧಾಂಜಲಿ ಅಂಗವಾಗಿ ತಾಳಮದ್ದಲೆ
ಶಿರಸಿ: ಶ್ರೀ ಯಕ್ಷಗಾನ ಕಲಾಸಂಘ ದೊಡ್ಮನೆ ಅವರಿಂದ ಅಗಸ್ಟ 25ರ ಮಧ್ಯಾಹ್ನ 3.30ರಿಂದ ಶ್ರೀ ಕೋಡಿಗದ್ದೆ ಮೂಕಾಂಬಿಕಾ ದೇವಾಲಯದ ಆವರಣದಲ್ಲಿ ಯಕ್ಷಗಾನ ಕಲಾವಿದರಾಗಿದ್ದ ದಿ.ರಾಮಚಂದ್ರ ಗಣೇಶ ಭಟ್ಟ ಕೋಡಿಗದ್ದೆ ಇವರ ಸ್ಮರಣಾರ್ಥ ಶೃದ್ಧಾಂಜಲಿ ಮತ್ತು ತಾಳಮದ್ದಲೆ ಕಾರ್ಯಕ್ರಮ ನಡೆಯಲಿದೆ.
ಹಿಮ್ಮೇಳ ಕಲಾವಿದರಾಗಿ ನಾಗರಾಜ ರಾವ್ ಮೊಗೊಳ್ಳೆ, ಶ್ರೀಧರ ಹೆಗಡೆ ಹೊಸ್ತೋಟ, ಶಿವರಾಮ ಹೆಗಡೆ ನಾಗಿನ್ಮನೆ ಭಾಗವಹಿಸಲಿದ್ದು, ಮುಮ್ಮೇಳದಲ್ಲಿ ಶ್ರೀಧರ ಭಟ್ಟ ಗಡಿಹಿತ್ಲು, ಟಿ.ಎ ಹೆಗಡೆ ಬಾನಬ್ಬಿ ತಿಮ್ಮಪ್ಪ ಭಟ್ಟ ಸಾರಂಗ ದೊಡ್ಮನೆ ಮಾದವ ಶರ್ಮ ಕಲಗಾರು, ಶಂಕರ ನಾರಾಯಣ ಹೆಗಡೆ ದಾನ್ಮವು, ಸುಬ್ರಹ್ಮಣ್ಯ ಭಟ್ಟ ಗೋಳಿಕೈ, ಗಣಪತಿ ಹೆಗಡೆ ಹೊನ್ನೆಕೈ, ಕೇಶವ ಹೆಗಡೆ ಕಿಬ್ಳೆ ಇವರುಗಳು ಭಾಗವಹಿಸಲಿದ್ದಾರೆ ಎಂದು ಸಂಘಟಕರಾದ ಕೇಶವ ಹೆಗಡೆ ಕಿಬ್ಳೆ ತಿಳಿಸಿದ್ದಾರೆ.
S News ಡಿಜಿಟಲ್
ಇದನ್ನು ಓದಿ: ಕಣ್ಮರೆಯಾದ ಕಾಲು ದಾರಿ https://sirinews.in/footwayroad/
ಆಶ್ರಯ ಮನೆ ಮಾಲಕ ಯಾರು?: ಗ್ರಾ ಪಂ ಸದಸ್ಯನ ಪ್ರಶ್ನೆಗೆ ಬೇಕು ಉತ್ತರ
ದಾಂಡೇಲಿ: ಅಂಬೇವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನವಗ್ರಾಮದಲ್ಲಿ 2014ರಲ್ಲಿ ಒಟ್ಟು 714 ಆಶ್ರಯ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಈವರೆಗೂ ಫಲಾನುಭವಿಗಳ ಹೆಸರಿಗೆ ಆಶ್ರಯ ಮನೆಗಳ ನೊಂದಣಿ ಆಗಿಲ್ಲ.
`ಹಂಚಿಕೆ ಮಾಡಲಾದ ಆಶ್ರಯ ಮನೆಗಳ ಮಾಲಿಕತ್ವವನ್ನು ಅಲ್ಲಿ ವಸತಿ ಹೂಡಿದವರ ಹೆಸರಿಗೆ ಮಾಡಿಕೊಡಬೇಕು\’ ಎಂದು ಅಂಬೇವಾಡಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಬಸವರಾಜ ಹುಂಡೆಕರ್ ಆಗ್ರಹಿಸಿದ್ದಾರೆ. `ಈ ಬಗ್ಗೆ ಅಂಬೇವಾಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಅಗತ್ಯ ಹಾಗೂ ಅತಿ ತುರ್ತು ಕ್ರಮ ಜರುಗಿಸಬೇಕು\’ ಎಂದು ಅವರು ಸುದ್ದಿಗಾರರ ಮೂಲಕ ಒತ್ತಾಯಿಸಿದರು.
S News ಡಿಜಿಟಲ್