ಗಡಿನಾಡು ಕಾರವಾರದಲ್ಲಿ ಕನ್ನಡ ಸಾಹಿತ್ಯ ಚಟುವಟಿಕೆಗಳು ಚುರುಕಾಗಿವೆ. ಈ ಊರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕವನ್ನು ಶುರು ಮಾಡಿದೆ.
ಸೋಮವಾರ ಕನ್ನಡ ಭವನದಲ್ಲಿ ಮಹಿಳಾ ಸಮಿತಿ ಉದ್ಘಾಟನೆ ಮತ್ತು ಶ್ರಾವಣ ಸಾಹಿತ್ಯ ಕಾರ್ಯಕ್ರಮ ಆಯೋಜನೆಯಾಗಿದ್ದು, ಇಲ್ಲಿ ನಡೆದ ಭಾವಗೀತೆ ಸ್ಪರ್ಧೆಯಲ್ಲಿನ ಗಾಯನಕ್ಕೆ ಸಾಹಿತ್ಯಾಭಿಮಾನಿಗಳು ತಲೆಭಾಗಿದರು. `ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಸಾಹಿತ್ಯ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಪ್ರತಿ ತಿಂಗಳು ಹೊಸ ಹೊಸ ಸಾಹಿತ್ಯ ಚಟುವಟಿಕೆ ಆಯೋಜಿಸಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡೀಸ್ ಕರೆ ನೀಡಿದರು. ಮಹಿಳಾ ಸಮಿತಿಯ ಬಲವರ್ಧನೆಗೆ 25 ಸಾವಿರ ರೂ ನೀಡುವುದಾಗಿ ಅವರು ಘೋಷಿಸಿದರು.
ನಗರಸಭೆಯ ಮಾಜಿ ಸದಸ್ಯ ದೇವಿದಾಸ ನಾಯ್ಕ ಅವರು `ಕಸಾಪ ಮಹಿಳಾ ಸಮಿತಿ ರಚನೆಯಾಗುವದರ ಮೂಲಕ ಹೊಸ ಮೈಲುಗಲ್ಲು ಸ್ಥಾಪಿಸಿದೆ’ ಎಂದರು. ಸಾಹಿತಿ ಪ್ರೇಮಾ ಟಿ ಎಮ್ ಆರ್ ಮಾತನಾಡಿ `ಮಹಿಳಾ ಸಾಹಿತ್ಯಕ್ಕೆ ಕಸಾಪ ಉತ್ತಮ ವೇದಿಕೆ ಕಲ್ಪಿಸಿದೆ’ ಎಂದರು. ಶಿಕ್ಷಕ ಜಿ ಡಿ ಮನೋಜ ಅವರು ಪದಾಧಿಕಾರಿಗಳ ಪಟ್ಟಿ ಘೋಷಿಸಿದರು. ಮಹಿಳಾ ಸಮಿತಿ ಅಧ್ಯಕ್ಷರಾಗಿ ಖೈರುನ್ನಿಸಾ ಶೇಖ ಆಯ್ಕೆಯಾದರು. ಗೌರವ ಕಾರ್ಯದರ್ಶಿಗಳಾಗಿ ದಿವ್ಯಾ ದೇವಿದಾಸ ನಾಯ್ಕ, ನಿವೇದಿತಾ ಕೊಳಂಬಕರ, ಕೊಶಾಧ್ಯಕ್ಷರಾಗಿ ಜಯಶೀಲಾ ಬಿಷ್ಟಣ್ಣನವರ, ಗೌರವ ಸಲಹೆಗಾರರಾಗಿ ಸಾಹಿತಿ ಪ್ರೇಮಾ ಟಿ ಎಮ್ ಆರ್, ಸದಸ್ಯರಾಗಿ ವಿದ್ಯಾ ರಾಮಾ ನಾಯ್ಕ, ಮಿಲನ್ ನಾಯ್ಕ, ಯಮುನಾ ಗಾಂವಕರ, ಗಂಗಾ ಗುನಗಿ, ಸಂಧ್ಯಾ ಹೆಗಡೆ, ಸಾವಿತ್ರಿ ಗಿರೀಶ್ ರಾವ್, ಲತಾ ಸೂರಜ್ ಕುರಮಕರ, ಜಯಶ್ರೀ ಗೌಡ ಆಯ್ಕೆಯಾದರು.
ಕಸಾಪ ತಾಲ್ಲೂಕು ಘಟಕ ಅಧ್ಯಕ್ಷರ ರಾಮಾ ನಾಯ್ಕ ಅವರು ಅಧ್ಯಕ್ಷತೆವಹಿಸಿದ್ದರು. ಕಸಾಪ ಗೌರವ ಕಾರ್ಯದರ್ಶಿ ಬಾಬು ಶೇಖ, ಗಣೇಶ ಬಿಷ್ಟಣ್ಣನವರ, ಕೋಶಾಧ್ಯಕ್ಷ ಶಿವಾನಂದ ತಾಂಡೇಲ,ಸದಸ್ಯರಾದ ಎನ್ ಜಿ ನಾಯ್ಕ, ರಮೇಶ ಗುನಗಿ, ಎ ಜಿ ಕೆರಳೆಕರ, ಹಿರಿಯ ವೈದ್ಯ ಡಾ ಹೆಗಡೆಕಟ್ಟೆ ಇದ್ದರು. ಈ ವೇಳೆ ಶ್ರಾವಣ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾವಗೀತೆ ಸ್ಪರ್ಧೆ ನಡೆಯಿತು. ಆ ಸ್ಪರ್ಧೆಯಲ್ಲಿ ಸ್ವಾತಿ ಭಟ್ ಪ್ರಥಮ, ಜಯಶೀಲಾ ಬಿಷ್ಟಣ್ಣನವರ ದ್ವಿತೀಯ, ಪ್ರೇಮಾ ಟಿ ಎಮ್ ಆರ್ ತೃತೀಯ, ವನಿತಾ ಶೇಟ, ಸ್ನೇಹಾ ನಾಯ್ಕ ಸಮಾಧಾನಕರ ಬಹುಮಾನಪಡೆದರು.
ನಿರ್ಣಾಯಕರಾಗಿ ಕೃಷ್ಣಾನಂದ ನಾಯ್ಕ, ಅಶೋಕ ಶೆಟ್ಟಿ, ಸಂಧ್ಯಾ ಹೆಗಡೆ ಅವರು ಕಾರ್ಯನಿರ್ವಹಿಸಿದ್ದರು. ಸದಾಶಿವಗಡ ಲಯನ್ಸ್ ಕ್ಲಬ್ ಸದಾಶಿವಗಡದವರು ಪ್ರಥಮ, ದೇವಿದಾಸ ನಾಯ್ಕ ದ್ವಿತೀಯ, ಬಾಬು ಶೇಖ ತೃತೀಯ, ರಾಮಾ ನಾಯ್ಕ, ಎನ್ ಜಿ ನಾಯ್ಕ ಸಮಾಧಾನಕರ ಬಹುಮಾನದ ಪ್ರಾಯೋಜಕತ್ವವಹಿಸಿದ್ದರು. ವಿದ್ಯಾ ನಾಯ್ಕ ಸಂಗಡಿಗರು ಪ್ರಾರ್ಥಿಸಿದರು. ದಿವ್ಯಾ ನಾಯ್ಕ ಸ್ವಾಗತಿಸಿದರು, ಜಯಶೀಲಾ ಬಿಷ್ಟಣ್ಣನವರ ನಿರೂಪಿಸಿದರು. ನಿವೇದಿತಾ ಕೊಳಂಬಕರ ವಂದಿಸಿದರು. ಸೂರಜ್ ಕುರಮಕರ ಸಹಕರಿಸಿದರು.
Discussion about this post