ಧಾರಾಕಾರ ಮಳೆ ಹಿನ್ನಲೆ ಅಗಸ್ಟ 18ರಂದು ಉತ್ತರ ಕನ್ನಡ ಜಿಲ್ಲಾಡಳಿತ ಮುಂಡಗೋಡುಹೊರತುಪಡಿಸಿ ಶಾಲಾ-ಕಾಲೇಜಿಗೆ ರಜೆ ಘೋಷಿಸಿದೆ. ಅದಾಗಿಯೂ, ಮುಂಡಗೋಡಿನ ಅತ್ತಿವೇರಿ ಗೌಳಿದಡ್ಡಿ ಭಾಗದ ಕೆಲ ಮಕ್ಕಳು ಈ ದಿನ ಶಾಲೆಗೆ ಗೈರಾಗಿದ್ದಾರೆ.
`ಶಾಲೆಗೆ ಹೋಗಲು ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು’ ಎಂದು ಆಗ್ರಹಿಸಿ ಮಕ್ಕಳು ಈ ದಿನ ಪ್ರತಿಭಟನೆ ನಡೆಸಿದರು. ಶಿವಾಜಿ ಸರ್ಕಲ್ ನಲ್ಲಿ ಅತ್ತಿವೇರಿ ಗ್ರಾಮಸ್ಥರ ಜೊತೆ ನಡೆದ ಪ್ರತಿಭಟನೆಯಲ್ಲಿ ಮಕ್ಕಳು ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ (ಚಂದ್ರಕಾoತ ಕಾದರೊಳ್ಳಿ ಬಣ)ದವರು ಈ ಪ್ರತಿಭಟನೆ ಆಯೋಜಿಸಿದ್ದು, ಸಂಘಟನೆ ಜಿಲ್ಲಾಧ್ಯಕ್ಷ ಬಸವರಾಜ ಸಂಗಮೇಶ್ವರ್ ಮುಂದಾಳತ್ವವಹಿಸಿದ್ದರು.
`ಅತ್ತಿವೇರಿ ಗ್ರಾಮದಲ್ಲಿ ಸುಮಾರು 700ಕ್ಕೂ ಅಧಿಕ ಕುಟುಂಬಗಳಿವೆ. ಇಲ್ಲಿನವರು ನಿತ್ಯ 2.5ಕಿಮೀ ನಡೆದು ಹುನಗುಂದಕ್ಕೆ ಬರತ್ತಾರೆ. ಅದಾದ ನಂತರ ಬಸ್ ಏರಿ ಮುಂಡಗೋಡಿಗೆ ಬರಬೇಕಿದೆ. ಬಸ್ ಸಮಸ್ಯೆಯಿಂದ 60 ವಿದ್ಯಾರ್ಥಿಗಳು ಶಾಲೆ ಕಲಿಯಲು ಸಮಸ್ಯೆ ಅನುಭವಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ವಿವರಿಸಿದರು. `ವಿದ್ಯಾರ್ಥಿಗಳ ಹಿತ ಹಿತದೃಷ್ಟಿಯಿಂದ ಅತ್ತಿವೇರಿ ಮತ್ತು ಅತ್ತಿವೇರಿ ಗೌಳಿದಡ್ಡಿಗೆ ಬೆಳಗ್ಗೆ 8 ಗಂಟೆಗೆ ಹಾಗೂ ಸಂಜೆ 5ಗಂಟೆಗೆ ಪ್ರತ್ಯೇಕ ಬಸ್ ಬಿಡಬೇಕು’ ಎಂದು ಆಗ್ರಹಿಸಿದರು.
ತಮ್ಮ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದ ಸಂಘಟನೆಯವರು ಅದಾದ ನಂತರ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು. ಕೆ.ಎಸ್.ಆರ್.ಟಿ.ಸಿ. ವಿಭಾಗಿಯ ನಿಯಂತ್ರಣ ಅಧಿಕಾರಿಗಳಿಗೆ ಮನವಿ ರವಾನಿಸುವುದಾಗಿ ಅಧಿಕಾರಿಗಳು ತಿಳಿಸಿದರು.
