ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶೈಲಾ ಮಡಿವಾಳ ಅವರ ಮನೆಯೊಳಗೆ ನೀರು ನುಗ್ಗಿದೆ. ಮನೆ ಮೇಲ್ಚಾವಣಿಯೂ ಮುರಿದಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸದ್ಯ ಧಾರಾಕಾರ ಮಳೆಯಾಗುತ್ತಿದ್ದು, ಅನೇಕ ಕಡೆ ಭಾನುವಾರ ಶುರುವಾರ ಮಳೆ ಕೊಂಚವೂ ಬಿಡುವು ಕೊಟ್ಟಿಲ್ಲ. ಸೋಮವಾರ ಕುಮಟಾದಲ್ಲಿ ರಭಸ ಮಳೆ ಸುರಿದಿದೆ.
ಪರಿಣಾಮ ಹೆಗಡೆ ಗ್ರಾಮದ ಸೋನಾರಕೇರಿಯ ಶೈಲಾ ಪರಮೇಶ್ವರ ಮಡಿವಾಳ ಅವರ ಮನೆಗೆ ನೀರು ನುಗ್ಗಿದೆ. ಮಳೆ ನೀರು ನುಗ್ಗಿದ್ದರಿಂದ ಮನೆಯ ಗೋಡೆಗಳು ಕುಸಿಯುತ್ತಿದ್ದು, ಇನ್ನಷ್ಟು ಕುಸಿತದ ಆತಂಕ ಎದುರಾಗಿದೆ.
ಮಳೆ ಅವಾಂತರದಿAದ ಶೈಲಾ ಮಡಿವಾಳ ಅವರಿಗೆ 1.30 ಲಕ್ಷ ರೂ ನಷ್ಟವಾಗಿದೆ. ಕಂದಾಯ ಅಧಿಕಾರಿಗಳು ಸ್ಥಳ ಭೇಟಿ ಮಾಡಿದ್ದಾರೆ.
