ಕಾರವಾರ: ಶಿಕ್ಷಣ, ಪರಿಸರ, ಆರೋಗ್ಯ, ಸಮಾಜ ಸೇವೆ ಮೊದಲಾದ ಕಾರ್ಯಗಳಿಂದ ಜನಮನ್ನಣೆ ಪಡೆದಿರುವ `ರೋಟರಿ ಕ್ಲಬ್ ಕಾರವಾರ ಸೀ ಸೈಡ\’ ಬುಧವಾರ ರಕ್ತದಾನ ಶಿಬಿರ ನಡೆಸುವ ಮೂಲಕ ಅಗತ್ಯವಿರುವವರಿಗೆ ನೆರವಾಗಿದೆ.
ಪ್ರತಿ ತಿಂಗಳು ಕನಿಷ್ಟ 3 ಕಾರ್ಯಕ್ರಮಗಳನ್ನು ಈ ಕ್ಲಬ್ ಆಯೋಜಿಸುತ್ತಿದೆ. ಅನುಜಯಪ್ರಕಾಶ ಅವರು ಕ್ಲಬ್ಬಿನ ಅಧ್ಯಕ್ಷರಾಗಿದ್ದು ಈ ತಿಂಗಳಿನಲ್ಲಿ ವನ ಮಹೋತ್ಸವ, ಶಾಲೆಗಳಿಗೆ ಅಗತ್ಯ ಪರಿಕ್ಕರ ವಿತರಣೆ, ಆರೋಗ್ಯ ಶಿಬಿರ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.
ಪ್ರಸ್ತುತ ಬುಧವಾರ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಸಂಘಟಿಸಲಾಗಿದ್ದು, ಗೃಹರಕ್ಷಕ ಸಿಬ್ಬಂದಿ ಆಗಮಿಸಿ ರಕ್ತದಾನ ಮಾಡಿದರು. ಇದರೊಂದಿಗೆ ರಾಮಶ್ರೀ ಗ್ಲೋಬಲ ಕನ್ಸಟ್ರಕ್ಷನ್ ಕಂಪನಿ ಸದಸ್ಯರು ಈ ಶಿಬಿರದಲ್ಲಿ ಭಾಗವಹಿಸಿದ್ದರು.
ಕ್ಲಬ್ಬಿನ ಕಾರ್ಯದರ್ಶಿ ಸಂಧ್ಯಾ ರಾವ್, ಸದಸ್ಯರಾದ ಕಿರಣ ರಾವ್, ವಿಶಾಲ ಶೆಟ್ಟಿ, ಜಯಪ್ರಕಾಶ ಜಿ ಕೆ ಇತರರು ರಕ್ತದಾನ ಮಾಡಿದರು. ಜಿಲ್ಲಾ ಸರ್ಜನ್ ಡಾ ಶಿವಾನಂದ ಕಡ್ತಳಕರ್ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು.