ಯಲ್ಲಾಪುರದ ಕಾಳಮ್ಮನಗರದಲ್ಲಿ ವಾಸವಾಗಿರುವ ಕೆಲ ಕುಟುಂಬದವರಿಗೆ ಈವರೆಗೂ ವಿದ್ಯುತ್ ಸಂಪರ್ಕ ಸಿಗದ ಬಗ್ಗೆ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಸಧನದಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ. ಬಡವರ ಪರ ಕಾಳಜಿತೋರಿದ ಅವರ ನಡೆಯನ್ನು ಸಾರ್ವಜನಿಕ ಸೇವಾ ಕೇಂದ್ರದವರು ಸ್ವಾಗತಿಸಿದ್ದಾರೆ.
`ಶಾಂತರಾಮ ಸಿದ್ದಿ ಅವರು ಎರಡು ವಾರದ ಹಿಂದೆ ಸ್ಥಳಪರಿಶೀಲನೆ ಮಾಡಿದ್ದರು. ಆ ವೇಳೆ ವಿದ್ಯುತ್ ಇಲ್ಲದೇ ಬಡ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿರುವುದನ್ನು ಅವರು ನೋಡಿದರು. ಈ ಸಮಸ್ಯೆಗೆ ಶಾಶ್ವತಪರಿಹಾರ ಒದಗಿಸಲು ಅವರು ಅಧಿವೇಶನದಲ್ಲಿ ವಿಷಯದ ಗಮನಸೆಳೆದಿದ್ದು, ಇತರೆ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ’ ಎಂದು ಸಾರ್ವಜನಿಕ ಸೇವಾ ಕೇಂದ್ರದ ಮುಖ್ಯಸ್ಥ ಧೀರಜ ತಿನ್ನೇಕರ್ ಹೇಳಿದ್ದಾರೆ.
`ಶಾಂತರಾಮ ಸಿದ್ದಿ ಅವರ ಪ್ರಶ್ನೆ ಇಂಧನ ಸಚಿವರಿಗೆ ತಲುಪಿದ್ದರಿಂದ ಅವರು ಸ್ಪಂದಿಸುವುದಾಗಿ ಹೇಳಿದ್ದಾರೆ. ಈ ನಡೆಯಿಂದ ಅಲ್ಲಿ ವಾಸಿಸುವ ಜನರಿಗೆ ವಿದ್ಯುತ್ ಸಿಗುವ ಆಶಾಭಾವನೆ ದೊರೆತಿದೆ. `ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಹೆಸ್ಕಾಂ ಅಧಿಕಾರಿಗಳು ಕಾರ್ಯಪ್ರರ್ವತ್ತರಾಗಬೇಕು. ಬಡ ಜನರಿಗೆ ನ್ಯಾಯ ಸಿಗಬೇಕು’ ಎಂದವರು ಹೇಳಿದ್ದಾರೆ.
