ಕುಮಟಾ: ಹುಟ್ಟುಹಬ್ಬದ ದಿನ ಚಾಕಲೇಟ್ ನೀಡುವುದನ್ನು ಮಾದರಿಯಾಗಿರಿಸಿಕೊಂಡ ಪುಠಾಣಿ ಚಲುವೆಯೊಬ್ಬಳು ತೊಟ್ಟಿಲಿನಲ್ಲಿರುವ ಕೃಷ್ಣನಿಗೂ ಚಾಕಲೇಟ್ ಅರ್ಪಿಸಿ ಮುಗ್ದತೆ ಮೆರೆದಿದ್ದಾಳೆ.
ಗೋಕರ್ಣದ ವೆಂಕಟ್ರಮಣ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಠಮಿಯಂದು ಕೃಷ್ಣನ ತೊಟ್ಟಿಲಲ್ಲಿ ಹಾಕಿ ಪೂಜಿಸಿದ ನಂತರ ಪುಠಾಣಿಯೊಬ್ಬಳು ತೊಟ್ಟಿಲಿಗೆ ಚಾಕಲೇಟ್ ಹಾಕಿದ್ದು, ಇದನ್ನು ನೋಡಿದ ಇನ್ನಷ್ಟು ಮಕ್ಕಳು ಚಾಕಲೇಟ್ ನೀಡಿ ಕೃಷ್ಣನಿಗೆ ಹುಟ್ಟುಹಬ್ಬದ ಶುಭ ಕೋರಿದರು!
ಇಷ್ಟ ದೇವರಿಕೆ ಕಾಣಿಕೆ ಹಾಕುವುದು ಎಲ್ಲಡೆ ವಾಡಿಕೆ. ಆದರೆ, ಇಲ್ಲಿ ಕಾಣಿಕೆ ಇಲ್ಲದ ಮಕ್ಕಳು ತಮ್ಮ ಬಳಿಯಿದ್ದ ಸಿಹಿ ತಿನಿಸು ನೀಡಿ ಕೃಷ್ಣನನ್ನು ಆರಾಧಿಸಿದ್ದಾರೆ. ಆ ನಂತರ ತೊಟ್ಟಿಲು ತೂಗಿ ಇಷ್ಟಾರ್ಥ ಸಿದ್ದಿಗೂ ಅವರು ಪ್ರಾರ್ಥಿಸಿದ್ದಾರೆ. ಕೃಷ್ಣನ ಹುಟ್ಟುಹಬ್ಬಕ್ಕೆ ನೀಡಿದ ಈ ವಿಶೇಷ ಸಿಹಿ ದೊಡ್ಡವರ ಅಚ್ಚರಿಕೆ ಕಾರಣವಾಗಿದೆ.