ಉತ್ತರ ಕನ್ನಡ ಜಿಲ್ಲೆಯ ಕಾಳಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಕಾರವಾರದ ಕದ್ರಾ ಹಾಗೂ ದಾಂಡೇಲಿಯ ಬೊಮ್ಮನಳ್ಳಿ ಜಲಾಶಯದಲ್ಲಿ ಸಂಗ್ರಹಿಸಿದ್ದ ಹೆಚ್ಚುವರಿ ನೀರನ್ನು ಅಣೆಕಟ್ಟು ಮೂಲಕ ಹೊರ ಬಿಡಲಾಗಿದೆ.
ಬೊಮ್ಮನಳ್ಳಿ ಜಲಾಶಯದ ಗರಿಷ್ಠ ನೀರಿನ ಮಟ್ಟ 438ಮೀಟರ್ ಆಗಿದ್ದು, ಸದ್ಯ ನೀರಿನ ಮಟ್ಟ 436.79 ಮೀಟರ್ ತಲುಪಿದೆ. ಈ ಹಿನ್ನಲೆ ಅಣೆಕಟ್ಟಿನ ಸುರಕ್ಷತೆಗಾಗಿ ಮಂಗಳವಾರ ಮಧ್ಯಾಹ್ನ ನೀರು ಹೊಡಬಿಡಲಾಗಿದೆ. ಕದ್ರಾ ಅಣೆಕಟ್ಟಿನ ಗರಿಷ್ಟ ನೀರಿನ ಮಟ್ಟ 34.50 ಮೀಟರ್ ಆಗಿದ್ದು, ಮಂಗಳವಾರ ಬೆಳಗ್ಗೆ 30 ಮೀಟರ್ ನೀರು ತುಂಬಿತ್ತು. ಮಧ್ಯಾಹ್ನ ನೀರಿನ ಪ್ರಮಾಣ ಏರಿಕೆ ಆಗಿದ್ದರಿಂದ ಅಲ್ಲಿಯೂ ನೀರು ಹೊರಬಿಡಲಾಗಿದೆ.
