ಗ್ರಾಮ ಪಂಚಾಯತಗಳ ಮೂಲಕ ಅನುಷ್ಟಾನವಾಗುವ ಉದ್ಯೋಗ ಖಾತರಿ ಯೋಜನೆ ಅಡಿ ಶಾಲೆಗಳ ಸುರಕ್ಷತೆಗೆ ಕಂಪೌಡ್ ನಿರ್ಮಿಸಲು ಅವಕಾಶವಿದೆ. ಶಿರಸಿ ತಾಲೂಕಿನ ದೇವನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ 6 ಶಾಲೆಗಳಿಗೆ ಈ ಯೋಜನೆ ಅಡಿ ಕಾಂಪೌoಡ್ ನಿರ್ಮಿಸಲಾಗಿದೆ.
2ಲಕ್ಷ ರೂ ವೆಚ್ಚದಲ್ಲಿ ಸ.ಹಿ ಪ್ರಾಥಮಿಕ ಶಾಲೆ ಮುಂಡ್ಗಮನೆ ಹಾಗೂ ತಲಾ 3,52,500ರೂ ವೆಚ್ಚದಲ್ಲಿ ಸರಗುಪ್ಪ ಗ್ರಾಮದ ಕರೂರು ಶಾಲೆ, ಸರಗುಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ , ದೇವನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಲಸಿನ ಕಟ್ಟಾ ಸರ್ಕಾರಿ ಪ್ರಾಥಮಿಕ ಶಾಲೆ, ದೇವನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ದೇವನಳ್ಳಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕಾಂಪೌoಡ್ ನಿರ್ಮಿಸಲಾಗಿದೆ. ಜೊತೆಗೆ ಸರ್ಕಾರಿ ಪ್ರಾಥಮಿಕ ಶಾಲೆ ಹಲಸಿನ ಕಟ್ಟಾಗೆ ಸಹ 5 ಲಕ್ಷ ವೆಚ್ಚದಲ್ಲಿಯೂ ತಡೆಗೋಡೆ ನಿರ್ಮಿಸಲಾಗಿದೆ.
ಈ ಕಾಮಗಾರಿ ನಿರ್ಮಾಣದಿಂದಾಗಿ ಶಾಲೆಯ ಭದ್ರತೆ ಹಾಗೂ ಸುರಕ್ಷತೆಯೂ ಸಾಧ್ಯವಾಗಿದೆ. ಇನ್ನೂ ಶಾಲೆಯ ಸುತ್ತಲೂ ದನಕರು, ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸಲು ಅನುಕೂಲವಾಗಿದೆ. ಶಾಲಾ ಮಕ್ಕಳು ಬಿಡುವಿನ ವೇಳೆಯಲ್ಲಿ ಕೈಗೊಂಡ ಕೈತೋಟ ನಿರ್ಮಾಣವು ನಶಿಸದಂತೆ ಕಾಪಾಡಲು ಸಹಾಯವಾಗಿದೆ.
ನಿಮ್ಮೂರ ಶಾಲೆಗೂ ಕಪೌಂಡ್ ಬೇಕಿದ್ದರೆ ಈ ಸುದ್ದಿ ಗ್ರಾ ಪಂ ಕಚೇರಿಗೆ ತಲುಪಿಸಿ. ಜೊತೆಗೆ ಅರ್ಜಿ ಸಲ್ಲಿಸಿ!