ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆ ಆಗುತ್ತಿರುವುದನ್ನು ಗಮನಿಸಿ ಜಿಲ್ಲಾಡಳಿತ ಅಗಸ್ಟ 20ರಂದು ಆರು ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.
ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡು, ದಾಂಡೇಲಿ ಹಾಗೂ ಜೊಯಿಡಾ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ನಿಯಮ ಅನ್ವಯವಾಗಲಿದೆ. ಎಂದಿನoತೆ ಶಿಕ್ಷಣ ಇಲಾಖೆ ವರದಿ ಹಾಗೂ ಹವಾಮಾನ ಇಲಾಖೆ ಮುನ್ಸೂಚನೆ ಆಧಾರದಲ್ಲಿ ಈ ರಜೆ ನೀಡಲಾಗಿದೆ.
ಶಿಕ್ಷಣಾಧಿಕಾರಿಗಳು ಈ ರಜೆ ಅನುಷ್ಠಾನಕ್ಕೆ ತರುವಂತೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಆದೇಶಿಸಿದ್ದಾರೆ. ಅಂಗನವಾಡಿ, ಪ್ರೌಢಶಾಲೆ ಹಾಘೂ ಪದವಿ ಪೂರ್ವ ಕಾಲೇಜುಗಳಿಗೆ ಈ ರಜೆ ನಿಯಮ ಅನ್ವಯ ಆಗಲಿದೆ.
Discussion about this post