ಯಲ್ಲಾಪುರ: ಇಡಗುಂದಿಯ ಶಾಂತಿ ಡಾಬಾ ಹಿಂದೆ ಸರಾಯಿ ಮಾರಾಟ ಮಾಡುತ್ತಿದ್ದ ಮಹೇಶ ರಂಗೋಜಿ ಬೋವಿವಡ್ಡರ್ ಎಂಬಾತನ ಮೇಲೆ ಯಲ್ಲಾಪುರ PSI ಸಿದ್ದಪ್ಪ ಗುಡಿ ದಾಳಿ ನಡೆಸಿದ್ದಾರೆ.
ರವೀಂದ್ರ ನಗರದ ಮಹೇಶ ಮೊದಲು ಅಲ್ಲಿ ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಕೆಲಸ ಸಿಗದ ಹಿನ್ನಲೆ ಇಡಗುಂದಿಯ ಶಾಂತಿ ಡಾಬಾದ ಹಿಂದೆ ತಾತ್ಕಾಲಿಕ ಶೆಡ್ ನಿರ್ಮಿಸಿ ಅಕ್ರಮವಾಗಿ ಸರಾಯಿ ದಾಸ್ತಾನು ಮಾಡಿಕೊಂಡಿದ್ದ. ಜೊತೆಗೆ ಅಲ್ಲಿಗೆ ಬರುವವರಿಗೆ ರಾಜ ಮರ್ಯಾದೆ ನೀಡಿ ಉಪಚರಿಸಿ ಮದ್ಯ ಪೂರೈಕೆ ಮಾಡುತ್ತಿದ್ದ. ಅಧಿಕೃತವಾಗಿ ಪರವಾನಿಗೆ ಪಡೆದವರಿಗೆ ಸರಾಯಿ ಮಾರಾಟಕ್ಕೆ ಮಾರಾಟಕ್ಕೆ ಇರುವ ಅವಕಾಶವನ್ನು ಮೀರಿ ಈತ ಅನಧಿಕೃತವಾಗಿ ಸಂಗ್ರಹಿಸಿದ್ದ ಸರಾಯಿಯನ್ನು ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದ.
ಈ ವಿಷಯ ಅರಿತ PSI ಸಿದ್ದಪ್ಪ ಗುಡಿ ಅಲ್ಲಿ ಹೋಗಿ ತಪಾಸಣೆ ನಡೆಸಿದ್ದರು. ಮದ್ಯ ಮಾರಾಟ ಹಾಗೂ ಸೇವನೆಗೆ ಅವಕಾಶ ನೀಡಲು ಆತನ ಬಳಿ ಯಾವುದೇ ಅನುಮತಿ ಇರಲಿಲ್ಲ. ಈ ಹಿನ್ನಲೆ ಅಲ್ಲಿದ್ದ ಪ್ಲಾಸ್ಟಿಕ್ ಲೋಟಗಳಸಹಿತ ನೀರಿನ ಬಾಟಲಿ ಹಾಗೂ ಮದ್ಯದ ಪ್ಯಾಕೆಟ್\’ಗಳನ್ನು ಅವರು ಜಪ್ತು ಮಾಡಿದರು.