ಅಂಕೋಲಾದ ಪತ್ರಕರ್ತ ಸೂರಜ ನಾಯ್ಕ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕವಾಗಿದ್ದಾರೆ.
ಸೂರಜ ನಾಯ್ಕ ಅವರು ವಿವಿಧ ಸಮಸ್ಯೆಗಳ ಬಗ್ಗೆ ಬೆಳಕು ಚಲ್ಲುವ ಹಲವು ವರದಿ ಪ್ರಕಟಿಸಿದ್ದಾರೆ. ಸಾಮಾಜಿಕ ಕಳಕಳಿಯ ಸುದ್ದಿಗಳನ್ನು ಅವರು ಪ್ರಸಾರ ಮಾಡಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಗ್ರಾಮೀಣ ಭಾಗದ ಆಗು-ಹೋಗುಗಳಿಗೆ ಅವರು ಧ್ವನಿಯಾಗಿದ್ದಾರೆ.
ಅವರ ಸೇವಾ ಮನೋಭಾವನೆ ಗಮನಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಅವರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಿಸಿದ್ದಾರೆ. ರಾಜ್ಯಮಟ್ಟದ ಸಂಘಟನೆಯಲ್ಲಿ ಉನ್ನತ ಜವಾಬ್ದಾರಿ ಸಿಕ್ಕಿದಕ್ಕಾಗಿ ಸೂರಜ ನಾಯ್ಕ ಅವರು ಸಂತಸ ಹಂಚಿಕೊoಡಿದ್ದಾರೆ.
Discussion about this post