• Latest
Sirsi The current will come from inside the earth!

ಶಿರಸಿ: ಭೂಮಿ ಒಳಗಿನಿಂದ ಬರಲಿದೆ ಕರೆಂಟು!

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Monday, October 20, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಶಿರಸಿ: ಭೂಮಿ ಒಳಗಿನಿಂದ ಬರಲಿದೆ ಕರೆಂಟು!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Sirsi The current will come from inside the earth!
ADVERTISEMENT

ಶಿರಸಿ-ಸಿದ್ದಾಪುರ ಭಾಗದ ವಿದ್ಯುತ್ ಸಮಸ್ಯೆ ಬಗ್ಗೆ ಶಾಸಕ ಭೀಮಣ್ಣ ನಾಯ್ಕ ಅಧಿವೇಶನದಲ್ಲಿ ವಿಷಯ ಮಂಡಿಸಿದ್ದಾರೆ. ಜೊತೆಗೆ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆ ಉತ್ಸವ ಹೋಗುವ ಮಾರ್ಗದಲ್ಲಿ ಭೂಗತ ವಿದ್ಯುತ್ ಮಾರ್ಗ ಅಳವಡಿಸುವಂತೆಯೂ ಆಗ್ರಹಿಸಿದ್ದಾರೆ. ಈ ಎರಡು ವಿಷಯಕ್ಕೆ ಇಂಧನ ಸಚಿವ ಕೆ ಜೆ ಜಾರ್ಜ ಸ್ಪಂದಿಸಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

`ಶಿರಸಿ-ಸಿದ್ದಾಪುರ ಭಾಗದ ದಟ್ಟ ಅರಣ್ಯದಲ್ಲಿ ಹಾದು ಹೋದ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ಮುಖ್ಯರಸ್ತೆ ಅಂಚಿನಲ್ಲಿ ಸ್ಥಳಾಂತರಿಸಬೇಕು’ ಎಂದು ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಅಧಿವೇಶನದಲ್ಲಿ ಆಗ್ರಹಿಸಿದ್ದರು. ಅದರೊಂದಿಗೆ `ಶಿರಸಿ ಮಾರಿಕಾಂಬಾ ದೇವಿ ಜಾತ್ರೆಯ ಉತ್ಸವ ತೆರಳುವ ಮಾರ್ಗದಲ್ಲಿ ಭೂಗತ ಕೇಬಲ್ ಮೂಲಕ ವಿದ್ಯುತ್ ಸಂಪರ್ಕ ಒದಗಿಸಬೇಕು’ ಎಂದು ಒತ್ತಾಯಿಸಿದ್ದರು.

ADVERTISEMENT

`ಶಿರಸಿ ಕ್ಷೇತ್ರ ಮಲೆನಾಡು ಪ್ರದೇಶವಾಗಿದ್ದು, ದಟ್ಟ ಅರಣ್ಯದಿಂದ ಕೂಡಿದೆ. ಮಳೆ ಶುರವಾದರೆ ಹಳ್ಳಿ ಭಾಗದ ವಿದ್ಯುತ್ ಲೈನ್ ಮೇಲೆ ಮರ ಬೀಳುತ್ತದೆ. ಇದರಿಂದ ವಾರಗಳ ಕಾಲ ವಿದ್ಯುತ್ ಸಮಸ್ಯೆ ಎದುರಾಗುತ್ತದೆ. ಅರಣ್ಯ ಪ್ರದೇಶದ ಲೈನ್ ರಸ್ತೆ ಬದಿ ಸ್ಥಳಾಂತರ ಮಾಡಿದರೆ ಗ್ರಾಮೀಣ ಜನರಿಗೆ ನಿರಂತರ ಬೆಳಕು ನೀಡಲು ಸಹಕಾರಿಯಾಗುತ್ತದೆ’ ಎಂದು ಭೀಮಣ್ಣ ನಾಯ್ಕ ಅವರು ಸದನಲ್ಲಿ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇಂಧನ ಸಚಿವ ಕೆ ಜೆ ಜಾರ್ಜ `ಉತ್ತರ ಕನ್ನಡ ಜಿಲ್ಲೆ 174ಕಿಮೀ ಹೈಟೆನ್ಸನ್ ತಂತಿ ಹೋಗಿದೆ. 592ಕಿಮೀ ಎಲ್ ಟಿ ಲೈನ್ ಎಳೆಯಲಾಗಿದೆ. 7ಕಿಮೀ ತಂತಿಯ ಮೇಲೆ ಪದೇ ಪದೇ ಮರ ಬಿದ್ದು ತೊಂದರೆ ಆಗುತ್ತಿದ್ದು, ಅದನ್ನು ಸ್ಥಳಾಂತರಿಸಲಾಗಿದೆ. 58ಕಿಮೀ ದೂರದ ತಂತಿ ಸ್ಥಳಾಂತರಕ್ಕೆ ಗುರುತು ಮಾಡಲಾಗಿದೆ. ಅದರಲ್ಲಿ 9 ಕಿಮೀ ಸ್ಥಳಾಂತರ ಕ್ರಮ ಜರುಗಿಸಲಾಗುತ್ತದೆ’ ಎಂದು ಉತ್ತರಿಸಿದ್ದರು.

ಸದ್ಯ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆಯ ಉತ್ಸವ ಹೋಗುವ ಮಾರ್ಗದಲ್ಲಿ ಭೂಗತ ಮಾರ್ಗದ ಮೂಲಕ ವಿದ್ಯುತ್ ಸರಬರಾಜು ಮಾಡಲು ಸರ್ಕಾರ ಅಧಿಕಾರಿಗಳಿಗೆ ನಿರ್ದೇಶಿಸಿದೆ. 4.6ಕಿಮೀ ಎಚ್ ಟಿ ಓವರ್ ಹೆಡ್ ಮಾರ್ಗ ಮತ್ತು 15.90ಕಿಮೀ ಎಲ್‌ಟಿ ಓವರ್ ಹೆಡ್ ಮಾರ್ಗವನ್ನು ಭೂಮಿಯ ಒಳಭಾಗಕ್ಕೆ ಬದಲಾಯಿಸುವಂತೆ ಇಂಧನ ಸಚಿವ ಕೆ ಜೆ ಜಾರ್ಜ ಅವರು ಟಿಪ್ಪಣಿ ಹೊರಡಿಸಿದ್ದಾರೆ. 3 ಕೋಟಿ ರೂ ವೆಚ್ಚದಲ್ಲಿ ಕೂಡಲೇ ಈ ಕಾಮಗಾರಿ ಕೈಗೊಳ್ಳುವಂತೆ ಇಂಧನ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ADVERTISEMENT

Discussion about this post

Previous Post

ರಾಜ್ಯ ಸಮಿತಿಗೆ ಆಯ್ಕೆಯಾದ ಅಂಕೋಲಾ ಪತ್ರಕರ್ತ

Next Post

ಹೂವು ತರಲು ಹೋದವಳು ಹೆಣವಾದಳು!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋