ಕಾರವಾರದ ಫೋಟೋಗ್ರಾಫರ್ ಹಾಗೂ ವಿಡಿಯೋಗ್ರಾಫರ್ ಎಲ್ಲರೂ ಸೇರಿ ಒಗ್ಗಟ್ಟಿನ ಸಂಘ ರಚಿಸಿಕೊಂಡಿದ್ದಾರೆ. ಬಾಡದ ಶಿವಾಜಿ ಸಭಾಭವನದಲ್ಲಿ ಸಂಘದ ಚಟುವಟಿಕೆಗಳಿಗೆ ಚಾಲನೆ ದೊರೆತಿದೆ.
186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಈ ಸಂಘದವರು 5 ವರ್ಷದೊಳಗಿನ ಮಕ್ಕಳಿಗೆ `ಮುದ್ದು ಕೃಷ್ಣ’ ಸ್ಫರ್ಧೆ ಆಯೋಜಿಸಿದ್ದು, ಅಲ್ಲಿ ಬಂದ ಫೋಟೋಗಳು ಕಣ್ಮನ ಸೆಳೆಯುತ್ತಿದ್ದವು. ಸ್ಪರ್ಧೆಯಲ್ಲಿ ಭಾಗವಹಿಸಿದ 13 ಮಕ್ಕಳಿಗೆ ಸಂಘದ ಉದ್ಘಾಟನಾ ವೇದಿಕೆಯಲ್ಲಿ ಬಹುಮಾನ ನೀಡಲಾಯಿತು.
ಹಿರಿಯ ಛಾಯಾಗ್ರಾಹಕರಾದ ಬಸೀರ್ ದಾವೂದ ಶೇಖ ಸದಾಶಿವಗಡ, ರಾಜೇಶ ನಾಯ್ಕ ಸದಾಶಿವಗಡ, ಲಕ್ಷ್ಮೀಕಾಂತ ಮುರಾರಿ ರೇವಂಡಿಕರ ಕೋಡಿಬಾಗ, ಚೇತನ ದಿಲೀಪ ಬಾನಾವಳಿ ಸದಾಶಿವಗಡ ಹಾಗೂ ಶ್ರೀಕಾಂತ ಹರಿಶ್ಚಂದ್ರ ನಾಯ್ಕ ಉಳಗಾ ಅವರಿಗೆ ಈ ವೇದಿಕೆಯಲ್ಲಿ ಗೌರವಿಸಲಾಯಿತು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಕಾರವಾರ ನಗರಸಭಾ ಅಧ್ಯಕ್ಷ ರವಿರಾಜ ಅಂಕೋಲೇಕರ, ಪ್ರಮುಖರಾದ ವಿನಾಯಕ ಕೆ ಜೋಶಿ, ನರೇಂದ್ರ ದೇಸಾಯಿ, ವೆಂಕಟೇಶ ಬಾಬು, ಜೋನ್ ಹಾಗೂ ಪರ್ಭತ್ ಎಸ್ ನಾಯ್ಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವನಿತಾ ರಾಜೇಶ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.
