ಮಗಳ ಮಾನ ಹರಾಜು ಮಾಡುವುದಾಗಿ ಭಟ್ಕಳದ ತರಕಾರಿ ವ್ಯಾಪಾರಿಯೊಬ್ಬರಿಗೆ ವಿದೇಶಿ ಫೋನ್ ಸಂಖ್ಯೆಯಿoದ ಬೆದರಿಕೆ ಬಂದಿದೆ. ದುಷ್ಕರ್ಮಿಗಳು 20 ಲಕ್ಷ ರೂ ಬೇಡಿದ್ದು, ಕೊನೆಗೆ 15 ಲಕ್ಷ ರೂ ಕೊಡದೇ ಇದ್ದರೆ ಮಗಳ ಖಾಸಗಿ ಫೋಟೋ-ವಿಡಿಯೋ ಬಹಿರಂಗಪಡಿಸುವುದಾಗಿ ಎಚ್ಚರಿಸಿದ್ದಾರೆ.
ಭಟ್ಕಳ ಕಿದ್ವಾಯಿ ಬೆಟ್ಟಗಾವಿನಲ್ಲಿ ಅಶ್ವರ ಸಾಬ್ (ಹೆಸರು ಬದಲಿಸಿದೆ) ಅವರು ತರಕಾರಿ ವ್ಯಾಪಾರ ಮಾಡಿಕೊಂಡಿದ್ದರು. ಅವರ ಮಗಳು ಸಾರಿಯಾ (ಹೆಸರು ಬದಲಿಸಿದೆ) ಅವರ ಮಾನ ಹರಾಜು ಮಾಡುವುದಾಗಿ ಅಶ್ವರ ಸಾಬ್ ಅವರಿಗೆ ವಿದೇಶಿ ಸಂಖ್ಯೆಯಿoದ ಫೋನ್ ಬಂದಿತ್ತು. ಅವರು ಆ ಫೋನ್ ನಿರ್ಲಕ್ಷಿಸಿದಾಗ ಅಶ್ವರ ಸಾಬ್ ಅವರ ಪತ್ನಿ ಶಹಿತಾ ಭಾನು (ಹೆಸರು ಬದಲಿಸಿದೆ) ಅವರಿಗೂ ಕಿಡಿಗೇಡಿಗಳು ಫೋನ್ ಮಾಡಿ ಪೀಡಿಸಲು ಶುರು ಮಾಡಿದ್ದರು.
ಕಿಡಿಗೇಡಿಗಳು ಹೊರದೇಶದ ಬೇರೆ ಬೇರೆ ಫೋನ್ ಸಂಖ್ಯೆಯಿoದ ಫೋನ್ ಮಾಡುತ್ತಿದ್ದರು. ಸಾರಿಯಾ ಅವರ ಖಾಸಗಿ ಫೋಟೋ-ವಿಡಿಯೋ ನಮ್ಮ ಬಳಿಯಿದ್ದು, ಅದನ್ನು ಬಹಿರಂಗಪಡಿಸುವುದಾಗಿ ಬೆದರಿಸುತ್ತಿದ್ದರು. `ಆ ಫೋಟೋ-ವಿಡಿಯೋ ಎಲ್ಲಡೆ ಕಳುಹಿಸಿ ನಿಮ್ಮ ಮರ್ಯಾದಿ ತೆಗೆಯುವೆ’ ಎಂದು ಹೆದರಿಸಿದ್ದರು. ಕೊನೆಗೆ `ಅರ್ಜಂಗ್ ಆಗಿ 20 ಲಕ್ಷ ಕೊಡು’ ಎಂದು ತಾಕೀತು ಮಾಡಿದ್ದರು.
ಅಗಸ್ಟ 18 ಹಾಗೂ 19ರಂದು ಬೇರೆ ಬೇರೆ ಸಂಖ್ಯೆಯಿAದ ಫೋನ್ ಮಾಡಿದ್ದ ಕಿಡಿಗೇಡಿಗಳು 15 ಲಕ್ಷದ ವ್ಯವಹಾರಕ್ಕೆ ಇಳಿದಿದ್ದರು. ಇದರಿಂದ ಬೇಸತ್ತ ಅಶ್ವರ ಸಾಬ್ ಅವರು ಪೊಲೀಸರ ಮೊರೆ ಹೋದರು. ಭಟ್ಕಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಫೋನ್ ಬಂದ ಸಂಖ್ಯೆಯ ಆಧಾರದಲ್ಲಿ ಕಿಡಿಗೇಡಿಗಳ ಹುಡುಕಾಟ ನಡೆಸಿದ್ದಾರೆ.
