ಕಾರವಾರದ ಸೋಶಿಯಲ್ ಗುಡ್ ಗ್ರೂಪಿನ ಸದಸ್ಯರು ಅಸ್ನೋಟಿ ಶಿವಾಜಿ ವಿದ್ಯಾ ಮಂದಿರ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸಮವಸ್ತ್ರ ವಿತರಿಸಿದ್ದಾರೆ.
`ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳುವುದಕ್ಕಾಗಿ ಬಾಲ್ಯದಲ್ಲಿ ಯೋಗ್ಯ ಶಿಕ್ಷಣ ಅಗತ್ಯ. ಹೀಗಾಗಿ ವಿದ್ಯಾರ್ಥಿಗಳು ಅಭ್ಯಾಸದ ಕಡೆ ಹೆಚ್ಚಿನಗಮನಕೊಡಬೇಕು’ ಎಂದು ಓ ಎಸ್ ಜಿ ಗ್ರೂಪ್ ಅಧ್ಯಕ್ಷರೂ ಆಗಿರುವ ಇಂಜಿನಿಯರ್ ಪವನ ಸಾವಂತ ಅವರು ಕರೆ ನೀಡಿದರು. ಇಂಜಿನಿಯರ್ ಪೃಥ್ವಿ ದರ್ಶನ ನಾಯ್ಕ ಮಾತನಾಡಿ `ಶ್ರಮ ಮತ್ತು ಸಂಕಲ್ಪವು ಉತ್ತಮ ಭವಿಷ್ಯದ ಕಡೆ ಕೊಂಡೊಯ್ಯುತ್ತದೆ’ ಎಂದರು.
ಓ ಎಸ್ ಜಿ ಗ್ರೂಪ್ ಕಾರ್ಯದರ್ಶಿ ಎನ್ ಜಿ ನಾಯ್ಕ ಅವರು ಮಕ್ಕಳಿಗೆ ಶುಭ ಹಾರೈಸಿದರು. ಶಾಲಾ ಮುಖ್ಯಾಧ್ಯಪಕ ಗಣೇಶ ಬಿಷ್ಟಣ್ಣನವರ ಅವರು ಓ ಎಸ್ ಜಿ ಗ್ರೂಪ್ ಸಹಾಯ-ಸಹಕಾರವನ್ನು ಶ್ಲಾಘಿಸಿದರು. ಗ್ರೂಪಿನ ಸದಸ್ಯರಾದ ದರ್ಶನ ನಾಯ್ಕ ಮಾಜಾಳಿ ಅವರು 30 ಸಾವಿರ ರೂ ದೇಣಿಗೆ ನೀಡಿರುವುದನ್ನು ಸ್ಮರಿಸಿದರು.
ದರ್ಶನ ನಾಯ್ಕ ದಂಪತಿಯನ್ನು ಈ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಶಿಕ್ಷಕರಾದ ಸಂತೋಷ ಕಾಂಬಳೆ, ರೂಪಾಲಿ ಸಾವಂತ, ಪ್ರಮುಖರಾದ ಸ್ವಪ್ನಾ ದರ್ಶನ ನಾಯ್ಕ ಹಾಜರಿದ್ದರು. ಸ್ಪಂದನಾ ಬಕ್ಕಜ್ಜಿ, ವಿಜಯಕುಮಾರ್ ನಾಯ್ಕ ಹಾಗೂ ಜೆ ಬಿ ತಿಪ್ಪೇಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.
Discussion about this post