ಮೇಷ ರಾಶಿ: ಹೊಸ ವಿಷಯ ಕಲಿಕೆಗೆ ಉತ್ತಮ ದಿನ. ಹೊಸ ಪ್ರಾರಂಭಗಳಿಗೂ ಈ ದಿನ ಅನುಕೂಲಕರ. ಹೂಡಿಕೆಗಳಿಗೆ ಸಹ ಸರಿಯಾದ ಸಮಯ. ಗೊಂದಲಗಳಿಗೆ ಪರಿಹಾರ ಸಿಗಲಿದೆ.
ವೃಷಭ ರಾಶಿ: ಆರ್ಥಿಕ ಲಾಭ ಆಗಲಿದೆ. ಕೆಲಸದ ಸ್ಥಳದಲ್ಲಿ ಸಾಧನೆ ಸಾಧ್ಯ. ಮನಸ್ಸಿಗೆ ಸಂತೋಷಕರ ವಿದ್ಯಮಾನಗಳು ನಡೆಯಲಿದೆ.
ಮಿಥುನ ರಾಶಿ: ನಿಮ್ಮಲ್ಲಿನ ತಪ್ಪು ನಿರ್ಧಾರ ಗೊಂದಲಕ್ಕೆ ಕಾರಣವಾಗಲಿದೆ. ಸಾಹಸ ಮನೋಭಾವನೆ ಹೆಚ್ಚಲಿದೆ. ಜೀವನ ನಿರ್ವಹಣೆ ವಿಷಯದಲ್ಲಿ ಎಚ್ಚರಿಕೆ ಅಗತ್ಯ.
ಕರ್ಕ ರಾಶಿ: ಉದ್ಯೋಗದ ವಿಷಯದಲ್ಲಿ ತಾಳ್ಮೆ ಅಗತ್ಯ. ಸಮಾಜ ಮತ್ತು ಕುಟುಂಬದಲ್ಲಿ ಮನ್ನಣೆ ಸಿಗಲಿದೆ. ನಿಜವಾದ ಪರಿಶ್ರಮಕ್ಕೆ ಯಶಸ್ಸು ದೊರೆಯಲಿದೆ.
ಸಿಂಹ ರಾಶಿ: ಆತ್ಮ ವಿಶ್ವಾಸ ಹೆಚ್ಚಾಗಲಿದೆ. ನಾಯಕತ್ವ ಗುಣ ಬೆಳೆಯಲಿದೆ. ಪ್ರಮುಖ ನಿರ್ಧಾರ ಪ್ರಕಟಿಸಲು ಈ ದಿನ ಸೂಕ್ತ.
ಕನ್ಯಾ ರಾಶಿ: ಕೆಲಸ ಕಾರ್ಯದಲ್ಲಿ ಅನಗತ್ಯ ವಿಳಂಬ ಆಗಲಿದೆ. ಆರೋಗ್ಯದ ವಿಷಯದಲ್ಲಿ ಎಚ್ಚರ ಅಗತ್ಯ.
ತುಲಾ ರಾಶಿ: ಹೊಸ ಅವಕಾಶಗಳಿಗಾಗಿ ಕಾಯಿರಿ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಉತ್ತಮ ಬಹುಮಾನ ನಿಮಗಾಗಿ ಕಾದಿದೆ.
ವೃಶ್ಚಿಕ ರಾಶಿ: ಹಣಕಾಸಿನ ದಂದ್ವಗಳು ನಿವಾರಣೆಯಾಗಲಿದೆ. ನಿಮ್ಮ ಮನೋಭಲ ಹೆಚ್ಚಾಗಲಿದೆ. ಗೊಂದಲ ಮನಸ್ಥಿತಿಯಿಂದ ಹೊರ ಬನ್ನಿ.
ಧನು ರಾಶಿ: ಕ್ಷೇತ್ರದಲ್ಲಿ ಯಶಸ್ಸು ಸಾಧ್ಯ. ಕೃಷಿಕರಿಗೆ ಉತ್ತಮ ದಿನ. ನೂತನ ಅನುಭವಗಳಿಂದ ಪಾಠ ಕಲಿಯುವಿರಿ.
ಮಕರ ರಾಶಿ: ನಿರ್ಧಾರ ಕೈಗೊಳ್ಳುವ ಮುನ್ನ ಆಳವಾಗಿ ಯೋಚಿಸಿ. ಉದ್ಯಮದಲ್ಲಿ ಹಿನ್ನಡೆಯಾದರೂ ಧೈರ್ಯದಿಂದ ಎದುರಿಸಿ. ಪ್ರಯತ್ನಪಟ್ಟರೆ ಯಶಸ್ಸು ಸಾಧ್ಯ.
ಕುಂಬ ರಾಶಿ: ನಿಮ್ಮ ಕೆಲಸಕ್ಕೆ ಸಹೋದ್ಯೋಗಿಗಳಿಂದ ಮೆಚ್ಚುಗೆ ಸಿಗಲಿದೆ. ವಿವಾದಳಿಂದ ದೂರವಿರುವುದು ಒಳಿತು. ಆರೋಗ್ಯದ ಕಡೆ ಜೋಪಾನ.
ಮೀನ ರಾಶಿ: ಸೃಜನಶೀಲತೆಯಿಂದ ಇರಿ. ಕುಟುಂಬದವರ ಜೊತೆ ಆಪ್ತವಾಗಿ ಮಾತನಾಡಿ. ಹಳೆಯ ಸ್ನೇಹಿತರ ಸಹಾಯ ಸಿಗುವ ಸಾಧ್ಯತೆಗಳಿವೆ.
Discussion about this post