ಅಂಕೋಲಾ: ಹಿಲ್ಲೂರು ಮಾಗೋಡಿನ ಉಮಾ ಹರಿಕಂತ್ರ ಹಾಗೂ ಆಕೆಯ ಪತಿ ಮಹಾದೇವ ಹರಿಕಂತ್ರ ಮೇಲೆ ಗುತ್ತಿಗೆದಾರ ಪ್ರವೀಣ ರಾಮಚಂದ್ರ ನಾಯಕ ಹಲ್ಲೆ ನಡೆಸಿದ್ದು, ಸಂತ್ರಸ್ತರು ನ್ಯಾಯಕ್ಕಾಗಿ ಪೊಲೀಸ್ ಮೊರೆ ಹೋಗಿದ್ದಾರೆ.
ಉಮಾ ತಮ್ಮ ಪತಿ ಜೊತೆ ಹಿಲ್ಲೂರಿನ ಮಾಗೋಡು ಬೆಟ್ಟದಲ್ಲಿ ದನ ಮೇಯಿಸುತ್ತಿದ್ದಾಗ ಅಲ್ಲಿಗೆ ಬಂದ ಆರೋಪಿ ಪ್ರವೀಣ ಅಡ್ಡಗಟ್ಟಿದ್ದಾನೆ. ಸ್ಥಳೀಯ ಹುಲಿದೇವರ ದೇವಸ್ಥಾನದ ಸಮೀಪ ದಂಪತಿಗೆ ಕೆಟ್ಟದಾಗಿ ನಿಂದಿಸಿ, ದೊಣ್ಣೆಯಿಂದ ಹೊಡೆದಿದ್ದಾನೆ. ಈ ವೇಳೆ ಗಂಡ-ಹೆoಡತಿಯ ಬಟ್ಟೆಗಳನ್ನು ಆತ ಹರಿದಿದ್ದಾನೆ.
ಈ ವಿಷಯವನ್ನು ಬೇರೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಹಲ್ಲೆಯಿಂದ ಆಘಾತಗೊಂಡ ಮಹಾದೇವ ಹರಿಕಂತ್ರ ಊರಿನ ಹಿರಿಯರಿಗೆ ವಿಷಯ ತಿಳಿಸಿದ್ದು, ಇದನ್ನು ಅರಿತ ಪ್ರವೀಣ ನಾಯಕ ಮತ್ತೆ ಹಿಲ್ಲೂರು ಹೊಳೆಮಕ್ಕಿ ಕ್ರಾಸ್ ಇಬ್ಬರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.