ಆಂಧ್ರ ಪ್ರದೇಶದಿಂದ ಗೋವಾಗೆ ಹೋಗುತ್ತಿದ್ದ ಆಸಿಡ್ ತುಂಬಿದ ಟ್ಯಾಂಕರ್ ಅಂಕೋಲಾ ತಾಲೂಕಿನ ಕಂಚಿನ ಬಾಗಿಲು ಬಳಿ ಪಲ್ಟಿಯಾಗಿದೆ.
ಪರಿಣಾಮ ಟ್ಯಾಂಕರಿನಲ್ಲಿದ್ದ ಆಸಿಡ್ ಚರಂಡಿ ಪಾಲಾಗಿದ್ದು, ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಯ ಜನ ಜಾಗೃತಿಯಿಂದ ಜನರ ಜೀವ ಉಳಿದಿದೆ. ಈ ಟ್ಯಾಂಕರಿನಲ್ಲಿ 34 ಟನ್ ಸಲ್ಪುರಿಕ್ ಆಸಿಡ್ ಇತ್ತು. ಟ್ಯಾಂಕರ್ ಪಲ್ಟಿಯಾಗಿದ್ದರಿಂದ ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದಿಂದಾಗಿ ಟ್ಯಾಂಕರಿನಲ್ಲಿದ್ದ ಆಸಿಡ್ ಎಲ್ಲವೂ ಚರಂಡಿ ಪಾಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಅಂಕೋಲಾ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿ ಕಾವಲಿದ್ದು, ಜನ ಆಸಿಡ್ ಮುಟ್ಟದಂತೆ ಎಚ್ಚರವಹಿಸಿದರು.
ಟ್ಯಾಂಕರ್ ಅಪಘಾತದ ದೃಶ್ಯಾವಳಿಗಳನ್ನು ಇಲ್ಲಿ ನೋಡಿ..