ಯಲ್ಲಾಪುರದ ಕಳಚೆಯಲ್ಲಿ ಸುರಿದ ಮಳೆಗೆ ಮನೆಯ ಗೋಡೆ ಕುಸಿತವಾಗಿದೆ. ಬುಧವಾರ ರಾತ್ರಿ ಗೋಡೆ ಕುಸಿದಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಿನವಿಡೀ ಸುರಿದ ಮಳೆಗೆ ಕಳಚೆ ಗದ್ದೆಕಾಶಿಮನೆಯ ವೆಂಕಟ್ರಮಣ ತಿಮ್ಮಣ್ಣ ಗದ್ದೆ ಅವರ ಮನೆ ನೆನೆದಿತ್ತು. ಜೊತೆಗೆ ಮನೆ ಸಮೀಪ ಝರಿ ನೀರು ಹರಿಯುತ್ತಿದ್ದು, ಅದರ ತೇವಾಂಶವೂ ಮನೆಗೆ ತಾಗಿತ್ತು. ಪರಿಣಾಮ ಬುಧವಾರ ರಾತ್ರಿ ಮನೆಯ ಗೋಡೆಗಳು ನೆಲಕ್ಕೆ ಅಪ್ಪಳಿಸಿದವು.
ಈ ಮನೆಯ ಇನ್ನೊಂದು ಗೋಡೆಯಲ್ಲಿಯೂ ಬಿರುಕು ಕಾಣಿಸಿಕೊಂಡಿದೆ. ಹೀಗಾಗಿ ಆ ಗೋಡೆ ಸಹ ಅಪಾಯದ ಅಂಚಿನಲ್ಲಿದೆ. ಮನೆ ಹಿಂಭಾಗದ ಗೋಡೆ ಕುಸಿದಿರುವುದರಿಂದ ಮನೆಯಲ್ಲಿದ್ದವರ ಜೀವಕ್ಕೆ ಸಮಸ್ಯೆ ಆಗಲಿಲ್ಲ. ಕಂದಾಯ ಅಧಿಕಾರಿಗಳು ಸ್ಥಳ ಭೇಟಿ ಮಾಡಿದ್ದಾರೆ.
