ಶಿರಸಿ ಗಾಂಧಿ ನಗರದ ಸಿಮೋನ್ ಅವರ ಮನೆ ವಿದ್ಯುತ್ ಅವಘಡದಿಂದ ಸುಟ್ಟಿದೆ. ಈ ವಿಷಯ ಅರಿತ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಅವರ ಮನೆಗೆ ಹೋಗಿ ಆರ್ಥಿಕ ನೆರವು ನೀಡಿದ್ದಾರೆ.
ಸಿಮೋನ್ ಅವರು ರಿಕ್ಷಾ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದು, ಅವರ ಜೀವನಕ್ಕೆ ಬೇರೆ ಆದಾಯ ಇಲ್ಲ. ಈ ನಡುವೆ ಮನೆ ವಿದ್ಯುತ್ ಅವಘಡದಿಂದ ಕರಕಲಾದ ಕಾರಣ ಅವರು ಕಂಗಾಲಾಗಿದ್ದಾರೆ. ಮನೆಗೆ ಭೇಟಿ ನೀಡಿದ ಅನಂತಮೂರ್ತಿ ಹೆಗಡೆ ಕುಟುಂಬದವರ ಜೊತೆ ಮಾತನಾಡಿದರು. ಅವರ ಸಮಸ್ಯೆ ಆಲಿಸಿ ಸಾಂತ್ವಾನ ಹೇಳಿದರು. ಅದಾದ ನಂತರ ತಮ್ಮ ಕಿಸೆಯಲ್ಲಿದ್ದ ಕಾಸು ತೆಗೆದುಕೊಟ್ಟರು.
ಅದಾದ ನಂತರ ಎಂದಿನoತೆ ಶಾಸಕರ ಕೆಲಸದ ವಿರುದ್ಧ ಸಿಡಿಮಿಡಿಗೊಂಡರು. `ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕರಾಗಿದ್ದಾಗ ಅವಘಡ ನಡೆದಾಗ ದೊಡ್ಡ ಮೊತ್ತ ಜನರಿಗೆ ಸಿಗುತ್ತಿತ್ತು. ಇದೀಗ ಒಂದು ರೂಪಾಯಿ ಸಹ ಸರ್ಕಾರದಿಂದ ಬರುತ್ತಿ’ ಎಂದು ಅನಂತಮೂರ್ತಿ ಹೆಗಡೆ ದೂರಿದರು. `ಬಡವರ ಹಕ್ಕು ಕಸಿಯುವ ಸರ್ಕಾರದ ನಡೆಯನ್ನು ಎಲ್ಲರೂ ಸೇರಿ ಪ್ರಶ್ನಿಸಬೇಕು’ ಎಂದು ಕರೆ ನೀಡಿದರು.
`ಈಗಿನ ಶಾಸಕರು ಹೆಚ್ಚು ಪ್ರಯತ್ನ ಮಾಡಿ ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ವಿಶೇಷ ಪರಿಹಾರ ಕೊಡಿಸಬೇಕು’ ಎಂದು ಆಗ್ರಹಿಸಿದರು. ಜೊತೆಗಿದ್ದ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ ಅವರು ಇದಕ್ಕೆ ತಲೆಯಾಡಿಸಿದರು.
Discussion about this post