ಜೊಯಿಡಾ-ದಾಂಡೇಲಿ ಭಾಗದ ಅನೇಕ ರಸ್ತೆಗಳು ಗುಂಡಿಗಳಿoದ ಕೂಡಿದೆ. ಆನಮೋಡ ರಸ್ತೆಯಲ್ಲಿರುವ ಗುಂಡಿಯ ಆಳ-ಅಗಲ ಅರಿಯಲು ವಾಹನ ಸವಾರರಿಂದ ಸಾಧ್ಯವಾಗುತ್ತಿಲ್ಲ.
ಆನಮೋಡ ರಸ್ತೆಯಲ್ಲಿನ ದೊಡ್ಡ ಗುಂಡಿಗಳು ಅಪಘಾತಕ್ಕೆ ಕಾರಣವಾಗುತ್ತಿದೆ. ಅನೇಕರು ಇಲ್ಲಿ ಬಿದ್ದು ಗಾಯಗೊಂಡಿದ್ದಾರೆ. ರಸ್ತೆ ಗುಂಡಿಯ ಬಗ್ಗೆ ಅರಿವಿದ್ದರೂ ಗುಂಡಿ ಮುಚ್ಚುವ ಕೆಲಸವಾಗದ ಬಗ್ಗೆ ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.
ರಾಮನಗರ-ಆನಮೋಡ ಮಾರ್ಗದಲ್ಲಿ ಸಂಚರಿಸುವವರು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಅಲ್ಲಿನ ಗುಂಡಿಗಳಿAದ ವಾಹನಗಳು ಸಹ ಹಾನಿಗೆ ಒಳಗಾಗಿವೆ. ಈ ಭಾಗದಲ್ಲಿ ಕಳಪೆ ಕಾಮಗಾರಿ ನಡೆಸಿದ ಹಾಗೂ ರಸ್ತೆ ನಿರ್ವಹಣೆ ಮಾಡದ ಗುತ್ತಿಗೆದಾರರ ವಿರುದ್ಧವೂ ಜನರ ಆಕ್ರೋಶ ಹೆಚ್ಚಾಗಿದೆ.
ಗಣೇಶ ಹಬ್ಬಕ್ಕೆ ಬೇರೆ ಬೇರೆ ಊರಿನಲ್ಲಿ ಉದ್ಯೋಗದಲ್ಲಿರುವ ಜನ ಊರಿಗೆ ಮರಳುತ್ತಿದ್ದು, ಅವರು ಅಪಘಾತದಲ್ಲಿ ಗಾಯಗೊಳ್ಳುತ್ತಿದ್ದಾರೆ. ಗೋವಾ – ಮಹಾರಾಷ್ಟ್ರದಿಂದ ಸಾವಿರಾರು ವಾಹನಗಳು ಈ ಭಾಗದಲ್ಲಿ ಸಂಚಾರ ಮಾಡುತ್ತಿದ್ದು, ಅಲ್ಲಿಂದ ಬರುವವರು ಇಲ್ಲಿನ ರಸ್ತೆ ನೋಡಿ ಕಂಗಾಲಾಗಿದ್ದಾರೆ.
Discussion about this post