ಕೃಷಿ ಹಾಗೂ ಹೈನುಗಾರಿಕೆ ಕೆಲಸ ಮಾಡಿಕೊಂಡಿದ್ದ ಹಳಿಯಾಳದ ಅರ್ಜುನ ಮಾನೆಶಿಂಧೆ ವಿದ್ಯುತ್ ಸ್ಪರ್ಶದಿಂದ ಸಾವನಪ್ಪಿದ್ದಾರೆ.
ಹಳಿಯಾಳದ ತೆರಗಾಂವಿನಲ್ಲಿ ಅರ್ಜುನ ಮಾನೆಶಿಂಧೆ (18) ಅವರು ವಾಸವಾಗಿದ್ದರು. ಅಗಸ್ಟ 22ರಂದು ಅವರು ಅದೇ ಊರಿನ ಸದಾನಂದ ಶಿದಬಾನವರ್ ಅವರ ಜೊತೆ ಅಂತ್ರೋಳ್ಳಿಗೆ ಹೋಗಿದ್ದರು. ಅಲ್ಲಿ ಅವರ ಹೊಲವಿದ್ದು, ಹೊಲಕ್ಕೆ ಹೋರಿಗಳನ್ನು ಮೇವಿಗೆ ಬಿಟ್ಟಿದ್ದರು. ಅದಾದ ನಂತರ ಹೊಲದ ಹತ್ತಿರದ ಕೊಟ್ಟಿಗೆಯಲ್ಲಿರುವ ಎಮ್ಮೆಗಳ ಮೇವಿಗಾಗಿ ಹುಲ್ಲು ಕೊಯ್ದರು.
ಆಮೇಲೆ ಹೊಲದಲ್ಲಿರುವ ಬೋರ್ ಚಾಲು ಮಾಡಲು ಹೋದರು. ಬೋರ್ ಬಟನ್ ಒತ್ತಿದಾಗ ಅವರ ದೇಹದೊಳಗೆ ವಿದ್ಯುತ್ ಪ್ರವೇಶವಾಗಿ ಅಲ್ಲಿಯೇ ಕುಸಿದು ಬಿದ್ದರು. ಅಲ್ಲಿಯೇ ಅವರು ಸಾವನಪ್ಪಿದರು. ಹಳಿಯಾಳ ಪೊಲೀಸರು ಸ್ಥಳಭೇಟಿ ನಡೆಸಿ ಪ್ರಕರಣ ದಾಖಲಿಸಿಕೊಂಡರು.
Discussion about this post