ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾರವಾರದ ಅಮದಳ್ಳಿಯಲ್ಲಿ ವಲಯ ಮಟ್ಟದ ಕ್ರೀಡಾಕೂಟ ಆಯೋಜಿಸಿದ್ದು, ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.
ಅಮದಳ್ಳಿ ವಲಯದ 8 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿದ್ದರು. ಅಂಬೇಡ್ಕರ್ ವಸತಿ ಶಾಲೆಯಿಂದ ಕ್ರೀಡಕೂಟ ಸಂಘಟಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ಕೆನರಾ ವೆಲ್ಫೇರ್ ಟ್ರಸ್ಟಿನ ಮುದುಗಾ ಜನತಾ ವಿದ್ಯಾಲಯ ಪ್ರೌಢಶಾಲೆಯ ಸ್ವಯಂ ಡಿ ತಾಂಡಲ್ ತಂಡದವರು ರಿಲೇ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಪಡೆದರು.
ದೀಕ್ಷಿತ ಸುಧಾಕರ ಹರಿಕಂತು ಅವರು ತ್ರಿವಿಧ ಸ್ಪರ್ಧೆ ಜಿಗಿತದಲ್ಲಿ ಪ್ರಥಮ ಸ್ಥಾನ ಮತ್ತು ರಹಾನ್ ರಮೇಶ್ ಹರಿಕಂತ್ರ ಅವರು ಬಾಲಕರ ವಿಭಾಗದ ತ್ರಿವಿಧ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿದರು. 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿದಾನಂದ ಮಹಾದೇವ ಹರಿಕಂತ್ರ ಹಾಗೂ ರಚನ್ ರವಿ ಹರಿಕಂತ್ರು ದ್ವಿತೀಯ ಸ್ಥಾನಪಡೆದರು. ಗುಂಪು ಆಟಗಳ ಸ್ಪರ್ಧೆ ವಿಭಾಗದಲ್ಲಿ ಸಂಕೇಶ ದಿವಾಕರ ಬಬ್ರುಕರ್ ತಂಡದವರು ತ್ರೋಬಾಲ್ ಆಟದಲ್ಲಿ ದ್ವಿತೀಯ ಬಹುಮಾನ ಗೆದ್ದರು.
ಈ ಎಲ್ಲ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕ ನಾಗರಾಜ್ ಗೌಡ ಹಾಗೂ ತಂಡದ ಮೇಲ್ವಿಚಾರಕರಾದ ಸ್ಮಿತಾ ಜಿ ನಾಯಕ್ ಅವರು ತರಬೇತಿ ನೀಡಿದ್ದರು. ಶಾಲೆಯ ಮುಖ್ಯೋಪಾಧ್ಯಾಪಕಿ ವೀಣಾ ಜಿ ಮಾಳಿಗೆರ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಉಮಾಕಾಂತ ಹರಿಕಂತ್ರ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ವಿನಾಯಕ ಡಿ ಕೋಡಾರ್ಕರ್ ಸಾಧಕರಿಗೆ ಶುಭ ಕೋರಿದರು.
Discussion about this post