ಮಳೆಯಿಂದಾಗಿ ಮನೆ ಕಳೆದುಕೊಂಡ ಸಿದ್ದಾಪುರದ ಕವಂಚೂರಿನ ಕಿರಣ ನಾಯ್ಕ ಅವರ ಕುಟುಂಬಕ್ಕೆ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಸಹಾಯ ಮಾಡಿದ್ದಾರೆ.
ಈಚೆಗೆ ಸುರಿದ ಮಳೆಗೆ ಕಿರಣ ನಾಯ್ಕ ಅವರ ಮನೆ ಮುರಿದಿತ್ತು. ಈ ವಿಷಯ ಅರಿತು ಶನಿವಾರ ಅಲ್ಲಿ ಅನಂತಮೂರ್ತಿ ಹೆಗಡೆ ಭೇಟಿ ನೀಡಿದರು. ಈವರೆಗೆ ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿದ ವಿಷಯ ತಿಳಿದು ಅವರು ಆಕ್ರೋಶವ್ಯಕ್ತಪಡಿಸಿದರು. ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಪರಿಹಾರದ ಮೊತ್ತ ನೀಡದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ ಘೋಷಿಸಿದರು. `ಪೂರ್ತಿ ಮನೆ ಬಿದ್ದರು ತಹಶೀಲ್ದಾರ್ ಸ್ಥಳಕ್ಕೆ ಬರುತ್ತಿಲ್ಲ. ಕೆಳ ಹಂತದ ಅಧಿಕಾರಿಗಳನ್ನು ಕಳುಹಿಸಿ ವರದಿ ಪಡೆಯುತ್ತಿದ್ದಾರೆ. ತಹಶೀಲ್ದಾರ್ ಜವಾಬ್ದಾರಿ ಮರೆತಿದ್ದಾರೆ’ ಎಂದವರು ದೂರಿದರು.
ಎಂದಿನoತೆ `ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ವಿಶೇಷವಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ಪೀಕರ್ ಆಗಿದ್ದಾಗ ಬಡವರ ಮನೆ ಬಿದ್ದಾಗ 5 ಲಕ್ಷ ರೂ ಪರಿಹಾರ ಕೊಡುತ್ತಿದ್ದರು’ ಎಂದು ಅವರು ಭಾಷಣ ಮಾಡಿದರು. `ಬಡವ ಮನೆ ಕಟ್ಟಲು ಕನಿಷ್ಟ 8 ಲಕ್ಷ ರೂ ಅಗತ್ಯವಿದೆ. ಅಷ್ಟೇ ಮೊತ್ತದ ಪರಿಹಾರ ಒದಗಿಸಬೇಕು’ ಎಂದು ಸಿದ್ದಾಪುರ ಮಂಡಲ ಬಿಜೆಪಿ ಅಧ್ಯಕ್ಷ ತಿಮ್ಮಪ್ಪ ಎಂ ಕೆ ಆಗ್ರಹಿಸಿದರು.
Discussion about this post