ಕುಮಟಾದ ಗಂಗೆಕೊಳ್ಳ ಗ್ರಾಮದಲ್ಲಿ ಸ್ಮಶಾನ ರಸ್ತೆ ಅತಿಕ್ರಮಣವಾಗಿದ್ದು, ಶನಿವಾರ ಸರ್ಕಾರ ಅದನ್ನು ತೆರವು ಮಾಡಿದೆ. ಯಂತ್ರಗಳ ಮೂಲಕ ಕಪೌಂಡ್ ಒಡೆದು ಸಾರ್ವಜನಿಕ ಓಡಾಟಕ್ಕೆ ರಸ್ತೆ ಬಿಟ್ಟು ಕೊಡಲಾಗಿದೆ.
ನಾಡುಮಾಸ್ಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಗಂಗೆಕೊಳ್ಳ ಗ್ರಾಮದ ಮುಖ್ಯ ರಸ್ತೆಯ ಸ್ಮಶಾನದಿಂದ ಸಮುದ್ರದ ಕಡೆ ಹೋಗುವ ರಸ್ತೆ ಅತಿಕ್ರಮಣವಾಗಿತ್ತು. ಸರ್ಕಾರಿ ಅನುಧಾನದ ಅಡಿ ಇಂಟರ್ಲಾಕ್ ಹಾಕಿ ಅಭಿವೃದ್ಧಿಪಡಿಸಿದ ಜಾಗವೂ ಕಬಳಿಕೆಯಾಗಿತ್ತು. ಇದರಿಂದ ಸಮುದ್ರಕ್ಕೆ ಹೋಗುವ ಮೀನುಗಾರರ ಜೊತೆ ಕೃಷಿಕರು, ಪ್ರವಾಸಿಗರು ಸಮಸ್ಯೆ ಅನುಭವಿಸುತ್ತಿದ್ದರು.
ಅಲ್ಲಿ ಮನೆ ನಿರ್ಮಿಸಿದ ವ್ಯಕ್ತಿಯೊಬ್ಬರು ರಸ್ತೆಯನ್ನು ಅತಿಕ್ರಮಿಸಿ ಕಪೌಂಡ್ ಹಾಕಿಕೊಂಡಿದ್ದರು. ಈ ಬಗ್ಗೆ ರಾಜೀವ ಎಂಬಾತರು ದೂರು ನೀಡಿದ್ದು, ಆ ದೂರಿನ ನಂತರ ಅಧಿಕಾರಿಗಳು ಎಚ್ಚೆತ್ತುಕೊಂಡರು. ಕಂದಾಯ ಇಲಾಖೆಯವರು ಪೊಲೀಸ್ ಹಾಗೂ ಗ್ರಾಮ ಪಂಚಾಯತದವರ ನೆರವುಪಡೆದು ಚೀರೆಕಲ್ಲಿನ ಕಪೌಂಡ್ ಒಡೆದರು.
