ಯಲ್ಲಾಪುರದ ಕುಬೇರ ಹೊಟೇಲ್ ಹಾಗೂ ಬಾಳಗಿಮನೆ ಟೀ ಅಂಗಡಿಯಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ನಡೆಯುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹೊನ್ನಾವರದಲ್ಲಿಯೂ ದಾಳಿ ನಡೆದಿದೆ.
ನಂದೂಳ್ಳಿ ಬೇಲಿಕಣಿಯ ಹರಿಶ್ಚಂದ್ರ ಆಚಾರಿ ಅವರು ಕೆಬಿ ರಸ್ತೆಯ ಕುಬೇರ ಹೊಟೇಲಿಗೆ ಬರುವವರಿಗೆ ಸರಾಯಿ ಕೊಟ್ಟು ಉಪಚರಿಸುತ್ತಿದ್ದರು. ಸರಾಯಿ ಮಾರಾಟ ಹಾಗೂ ಸೇವನೆಗೆ ಅವರ ಬಳಿ ಪರವಾನಿಗೆ ಇರಲಿಲ್ಲ. ಹೀಗಾಗಿ ಯಲ್ಲಾಪುರ ಪಿಎಸ್‌ಐ ಯಲ್ಲಾಲಿಂಗ ಕನ್ನೂರು ಅವರು ದಾಳಿ ಮಾಡಿದರು.
ಬಾಳಗಿಮನೆಯ ಲಕ್ಷಣ ಗೌಡ ಅವರು ಮಾಗೋಡು ಕ್ರಾಸಿನ ಹತ್ತಿರ ತಾತ್ಕಾಲಿಕ ಶೆಡ್ ನಿರ್ಮಿಸಿದ್ದರು. ಅಲ್ಲಿ ಆಗಮಿಸುವವರಿಗೆ ಅವರು ಸರಾಯಿ ಕೊಡುತ್ತಿದ್ದರು. ಅವರ ಬಳಿ ಸಹ ಸರಾಯಿ ಮಾರಾಟಕ್ಕೆ ಪರವಾನಿಗೆ ಇರಲಿಲ್ಲ. ಇದನ್ನು ಅರಿತು ಪಿಎಸ್‌ಐ ಯಲ್ಲಾಲಿಂಗ ಕನ್ನೂರು ಅವರು ದಾಳಿ ಮಾಡಿದರು.
ಹೊನ್ನಾವರದಲ್ಲಿಯೂ ದಾಳಿ
ಹೊನ್ನಾವರದ ಮೀನು ಮಾರುಕಟ್ಟೆ ಬಳಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮಂಜು ಎಚ್ ಎಂ ಮೇಲೆ ಹೊನ್ನಾವರ ಪಿಸೈ ಮಂಜುನಾಥ ಅವರು ದಾಳಿ ಮಾಡಿದರು. ಸೊರಬದ ಮಂಜು ಎಚ್ ಎಂ ಸದ್ಯ ಹೊನ್ನಾವರದ ಲಕ್ಷಿನಾರಾಯಣ ನಗರದಲ್ಲಿ ವಾಸವಾಗಿದ್ದು, ವೈನ್ ಶಾಫಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಅಲ್ಲಿನ ಮದ್ಯವನ್ನು ಅವರು ಅಕ್ರಮವಾಗಿ ಸಾಗಿಸಿ ಹೊನ್ನಾವರದ ಮೀನು ಮಾರುಕಟ್ಟೆ ರಸ್ತೆಯ ಉದ್ಯಾನವನದ ಮಾರುವಾಗ ಸಿಕ್ಕಿಬಿದ್ದರು. ಈ ಎಲ್ಲಾ ಪ್ರಕರಣದಲ್ಲಿಯೂ ಪೊಲೀಸರು ಸಿಕ್ಕ ಸರಾಯಿ ಪೌಚು ಹಾಗೂ ಹಣವನ್ನು ವಶಕ್ಕೆಪಡೆದು ಪ್ರಕರಣ ದಾಖಲಿಸಿದರು.
Discussion about this post