ಕಾರವಾರದ ಬಾಡ ಹಾಗೂ ಸುತ್ತಲಿನ 18 ಗ್ರಾಮದ ಭಕ್ತರನ್ನು ಕಾಪಾಡುವ ಮಹಾದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಅರವಿಂದ ಮಾರುತಿ ಗುನಗಿ ಅವರು ಆಯ್ಕೆಯಾಗಿದ್ದಾರೆ.
ಈ ಸಮಿತಿಯಲ್ಲಿ 9 ಜನ ಸದಸ್ಯರಿದ್ದು, ಎಲ್ಲರೂ ಸೇರಿ ಸಭೆ ನಡೆಸಿದರು. ಈ ವೇಳೆ ಅರವಿಂದ ಗುನಗಿ, ಶಿವಾನಂದ ನಾಯ್ಕ, ಶಶಿಕಾಂತ ನಾಯ್ಕ, ಸದಾನಂದ ಬಾಂದೇಕರ್ ಅವರು ಅಧ್ಯಕ್ಷ ಸ್ಥಾನಕ್ಕೆ ಆಸಕ್ತಿವ್ಯಕ್ತಪಡಿಸಿದ್ದರು. ಅದಾದ ನಂತರ ಎಲ್ಲಾ ಸದಸ್ಯರು ದಸ್ಯರು ಚೀಟಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಿದರು. ಆ ವೇಳೆ ಅರವಿಂದ ಗುನಗಿ ಅವರು ದೇವಸ್ಥಾನದ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.
ದೇವಸ್ಥಾನದ ಕಾರ್ಯದರ್ಶಿಯಾಗಿ ಗುರುದತ್ತ ಈಶ್ವರ ಬಂಟ, ಖಜಾಂಚಿ ಶಶಿಕಾಂತ ಆನಂದು ನಾಯ್ಕ ಅವರನ್ನು ಸರ್ವಾನುಮತದಿಂದ ಸಮಿತಿ ಆಯ್ಕೆ ಮಾಡಿತು. ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಒಟ್ಟಾಗಿ ದೇವರಿಗೆ ಪೂಜೆ ಸಲ್ಲಿಸಿದರು. ಶ್ರದ್ಧಾ-ಭಕ್ತಿಯಿಂದ ನಡೆದುಕೊಳ್ಳುವ ಬಗ್ಗೆ ದೇವರ ಮುಂದೆ ಪ್ರಮಾಣ ಮಾಡಿದರು.
ಈ ಸಭೆಯಲ್ಲಿ ದೇವಸ್ಥಾನದ ಸಮಿತಿಯ ಸದಸ್ಯರಾದ ಶಶಿಕಾಂತ ನಾಯ್ಕ, ದೀಪಕ ನಾಯ್ಕ, ಭಾರತಿ ಗುನಗಿ, ಸುಜಾತಾ ಮಡಿವಾಳ ಹಾಗೂ ದೇವಸ್ಥಾನದ ಪ್ರಸ್ತುತ ಅರ್ಚಕರು ಇದ್ದರು.
