ಮೇಷ ರಾಶಿ: ನಿಮ್ಮ ನಡೆ-ನುಡಿ ನೇರವಾಗಿರಲಿ. ನಿಮ್ಮ ಜೀವನ ಶೈಲಿ ಆರೋಗ್ಯದ ಮೇಲೆ ಪ್ರಭಾವ ಬೀರುವುದನ್ನು ಗಮನಿಸಿ. ಅನಗತ್ಯ ಚರ್ಚೆ ಹಾಗೂ ಅವಹೇಳನಗಳಿಂದ ದೂರವಿರಿ.
ವೃಷಭ ರಾಶಿ: ಹಣಕಾಸು ವಿಷಯದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಶಕ್ತಿ ಹಾಗೂ ಧೈರ್ಯವನ್ನು ಸರಿಯಾಗಿ ಬಳಸಿಕೊಳ್ಳಿ. ಉತ್ತಮ ಯೋಜನೆಗಳ ಜಾರಿಗೆ ಪ್ರಯತ್ನಿಸಿ.
ಮಿಥುನ ರಾಶಿ: ಸಹಕಾರಿ ತತ್ವದ ಅಡಿ ಮಾಡುವ ಕೆಲಸ ಫಲ ಕೊಡುತ್ತದೆ. ನಿಮ್ಮಲ್ಲಿರುವನಾಯಕತ್ವ ಗುಣಬಳಸಿ ¸ಹೋದ್ಯೋಗಿಗಳಿಂದ ಕೆಲಸಪಡೆಯಿರಿ. ಮಾತು ಕಡಿಮೆ ಮಾಡುವುದು ಸೂಕ್ತ.
ಕರ್ಕ ರಾಶಿ: ನಿಮ್ಮೊಳಗಿನ ಶಕ್ತಿ ಜಾಗೃತಿಗೊಳಿಸಲು ಧ್ಯಾನ ಮಾಡಿ. ಧೈರ್ಯದಿಂದ ಹೊಸ ಸವಾಲುಗಳನ್ನು ಎದುರಿಸಿ. ನಿಮ್ಮ ಮೇಲೆ ನಡೆಯುವ ದಬ್ಬಾಳಿಕೆಗಳನ್ನು ತಾಳ್ಮೆಯಿಂದ ಎದುರಿಸುವುದು ಮುಖ್ಯ.
ಸಿಂಹ ರಾಶಿ: ನಿಮ್ಮ ಒಳ್ಳೆಯ ಮಾತು ಬೇರೆಯವರಿಗೆ ಪ್ರೇರಣೆ ಆಗಲಿದೆ. ಚಟುವಟಿಕೆಯಿಂದ ದಿನ ಕಳೆಯಿರಿ. ಸಹಾಯ ಮಾಡಿದವರನ್ನು ಸ್ಮರಿಸಿ.
ಕನ್ಯಾ ರಾಶಿ: ನಿಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿ. ಕಾರ್ಯಕ್ಷೇತ್ರದ ಸಾಧನೆ ಬಗ್ಗೆ ಚಿಂತಿಸಿ. ಪ್ರಯತ್ನಿಸಿದರೆ ಮಾತ್ರ ಗೆಲುವು ಸಾಧ್ಯ.
ತುಲಾ ರಾಶಿ: ಆರೋಗ್ಯದ ಬಗ್ಗೆ ಮುತುವರ್ಜಿವಹಿಸಿ. ನಿಮ್ಮ ಶಕ್ತಿ ಏನು ಎಂಬುದು ಅರಿತು ಅದನ್ನು ಸದುಪಯೋಗಪಡಿಸಿಕೊಳ್ಳಿ. ಅನಗತ್ಯ ಚರ್ಚೆಗಳಿಂದ ದೂರವಿರಿ.
ವೃಶ್ಚಿಕ ರಾಶಿ: ಸ್ನೇಹಿತರನ್ನು ಭೇಟಿ ಮಾಡುವಿರಿ. ಕುಟುಂಬದ ಆಗು-ಹೋಗುಗಳಿಗೆ ಸ್ಪಂದಿಸಿ. ಕೆಲಸದ ವಿಚಾರದಲ್ಲಿ ಶ್ರದ್ಧೆ ಅಗತ್ಯ.
ಧನು ರಾಶಿ: ಹೊಸ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಸೂಕ್ತ ಸಮಯ. ನಿಮ್ಮ ಗುರಿ ಅರಿತು ಅದರ ಬಗ್ಗೆ ಯೋಚಿಸಿ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.
ಮಕರ ರಾಶಿ: ಧನಾಗಮನದ ಸಾಧ್ಯತೆಯಿದೆ. ಹೊಸ ಅವಕಾಶಗಳು ಅರೆಸಿ ಬರಲಿದೆ. ಶ್ರದ್ಧೆಯಿಂದ ಕೆಲಸ ಮಾಡಿ ಪ್ರಗತಿ ಸಾಧಿಸಿ.
ಕುಂಭ ರಾಶಿ: ನಿಮ್ಮಲ್ಲಿನ ರಚನಾತ್ಮಕ ಸಂಗತಿಗೆ ಅವಕಾಶಗಳಿವೆ. ಹೊಸ ವಿಷಯಗಳನ್ನು ಕಲಿಯಿರಿ. ಪ್ರಯತ್ನಗಳು ಫಲ ಕೊಡುತ್ತವೆ.
ಮೀನ ರಾಶಿ: ಮನಸ್ಸಿನ ನೆಮ್ಮದಿಗಾಗಿ ಧ್ಯಾನ ಮುಂದುವರೆಸಿ. ಧನ್ಯತಾ ಭಾವವನ್ನು ಅನುಭವಿಸಿ. ಬೇರೆಯವರ ಸಾಧನೆ ಗುರುತಿಸಿ, ಗೌರವಿಸುವ ಹೊಣೆ ನಿಮ್ಮ ಮೇಲಿದೆ.
Discussion about this post