ಭಟ್ಕಳ ಪೊಲೀಸ್ ಠಾಣೆ ಪಕ್ಕದಲ್ಲಿದ್ದ ತರಕಾರಿ ಅಂಗಡಿಗೆ ಬೆಂಕಿ ತಗುಲಿದೆ. ಪರಿಣಾಮ ಇಡೀ ಅಂಗಡಿ ಸುಟ್ಟು ಭಸ್ಮವಾಗಿದೆ.
ಸೋಮವಾರ ಮಧ್ಯಾಹ್ನ ದಿಢೀರ್ ಆಗಿ ತರಕಾರಿ ಅಂಗಡಿ ಹೊತ್ತಿ ಉರಿಯಲು ಶುರುವಾಯಿತು. ಸಮೀಪದಲ್ಲಿದ್ದವರು ಬೆಂಕಿ ಆರಿಸುವ ಪ್ರಯತ್ನ ಮಾಡಿದರೂ ಅದು ಪ್ರಯೋಜನವಾಗಲಿಲ್ಲ. ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಅಲ್ಲಿನವರು ಫೋನ್ ಮಾಡಿದರು. ಅಗ್ನಿಶಾಮಕ ಸಿಬ್ಬಂದಿಯೂ ಆಗಮಿಸಿ ಬೆಂಕಿ ಆರಿಸುವ ಪ್ರಯತ್ನ ಮಾಡಿದರು.
ಖಾಸಿಮ್ ಫ್ರೂಟ್ಸ್ ಆಂಡ್ ವೆಜಿಟೇಬಲ್ ಮಳಿಗೆ ಅಗ್ನಿ ಅವಘಡದಿಂದ ಕರಕಲಾಗಿದ್ದು, ಮಾಲಕರಿಗೆ ಲಕ್ಷಾಂತರ ರೂ ನಷ್ಟವಾಗಿದೆ. ಅಂಗಡಿಯಲ್ಲಿದ್ದ ಹಣ್ಣು ಹಾಗೂ ತರಕಾರಿಗಳು ಸಹ ಸಂಪೂರ್ಣವಾಗಿ ಸುಟ್ಟಿವೆ. ಒಳಗಿದ್ದ ಇನ್ನಿತರ ಪೀಠೋಪಕರಣಗಳು ಸಹ ಸುಟ್ಟಿವೆ. ಉಡುಪಿಯಿಂದಲೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸುವ ಕೆಲಸ ಮಾಡಿದ್ದಾರೆ.
ಈ ಅಗ್ನಿ ಅವಘಡಕ್ಕೆ ವಿದ್ಯುತ್ ಶಾರ್ಟ ಸರ್ಕೀಟ್ ಕಾರಣ ಎಂಬ ಮಾಹಿತಿಯಿದೆ. ಪೊಲೀಸರು ಸ್ಥಳದಲ್ಲಿದ್ದಾರೆ.
Discussion about this post