ಹೊನ್ನಾವರದ ಜಾಫರ್ ಹಾಗೂ ನೌಶಾದ್ ಜೊತೆ ಹೈದರಬಾದಿನ ಸುಜಾತಾ ಎಂಬಾತರು ಸೇರಿ 33 ಜನರಿಗೆ ವಂಚಿಸಿದ್ದಾರೆ. ವಿದೇಶದಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ 52 ಲಕ್ಷ ರೂ ಹಣಪಡೆದು ಯಾಮಾರಿಸಿದ್ದಾರೆ.
ಕೇರಳದ ಬಿಚ್ಚು ಜಂತಿಲ್ ಅವರು ತಮಗಾದ ಅನ್ಯಾಯದ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ವಿವರವಾಗಿ ಹೇಳಿದ್ದಾರೆ. ಹೊನ್ನಾವರ ಹೆರೆಅಂಗಡಿಯಲ್ಲಿರವ ಜಾಫರ್ ಸಾಧಿಕ್ ಹುಸೇನ್ ಮುಕ್ತೆಸರ್ ಅವರು ಬಿಚ್ಚು ಜಂತಿಲ್ ಅವರಿಗೆ ಕುವೈತ್’ಲಿ ಪರಿಚಯವಾದರು. 2024ರ ಡಿಸೆಂಬರಿನಲ್ಲಿ ಸಿಕ್ಕ ಅವರು `ಕುವೈತ್’ನ ರಕ್ಷಣಾ ಇಲಾಖೆಯಲ್ಲಿ 48 ಉದ್ಯೋಗ ಖಾಲಿ ಇದೆ’ ಎಂದಿದ್ದರು. `ಅದಕ್ಕೆ ಅರ್ಹ ವ್ಯಕ್ತಿಗಳ ಹುಡುಕಾಟ ನಡೆದಿದ್ದು, ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವೆ’ ಎಂಬ ಮಾತು ಕೊಟ್ಟಿದ್ದರು.
ಇದಕ್ಕೆ ಸಾಕ್ಷಿಯಾಗಿ ರಕ್ಷಣಾ ಇಲಾಖೆಯ ಪತ್ರವನ್ನು ಕಾಣಿಸಿದ್ದರು. ಅದನ್ನು ನಂಬಿದ ಬಿಚ್ಚು ಜಂತಿಲ್ ಅವರು ತಮ್ಮ ಸ್ನೇಹಿತ ನೌಶಾದ ಅಂಗೀಲತ್ ಜೊತೆ ಸೇರಿ ನಿರುದ್ಯೋಗಿಗಳನ್ನು ಭೇಟಿ ಮಾಡಿದ್ದರು. ಒಟ್ಟು 33 ಜನರಿಗೆ ಕೆಲಸ ಕೊಡಿಸುವಂತೆ ಬಿಚ್ಚು ಜಂತಿಲ್ ಅವರು ಜಾಫರ್ ಸಾಧಿಕ್ ಹುಸೇನ್ ಮುಕ್ತೆಸರ್ ಅವರಲ್ಲಿ ಮನವಿ ಮಾಡಿದ್ದರು. ಇದಕ್ಕಾಗಿ ಆ 33 ಜನರ ಪಾಸ್‌ಪೋರ್ಟ ದಾಖಲೆಗಳನ್ನು ಬಿಚ್ಚು ಜಂತಿಲ್ ಅವರು ಹೆರೆಅಂಗಡಿಗೆ ತಲುಪಿಸಿದ್ದರು.
ಅದಾದ ನಂತರ ಹೈದರಾಬಾದಿನಿಂದ ಸುಜಾತಾ ಜಮ್ಮಿ ಎಂಬಾತರು ಬಿಚ್ಚು ಚಂತಿಲ್ ಅವರಿಗೆ ಫೋನ್ ಮಾಡಿ, `ದಾಖಲೆಗಳನ್ನು ರಕ್ಷಣಾ ಇಲಾಖೆಗೆ ತಲುಪಿಸಲು ಹಣ ಕೊಡಬೇಕು’ ಎಂದಿದ್ದರು. ಈ ವೇಳೆ ಸುಜಾತಾ ಜುಮ್ಮಿ ಅವರಿಗೆ 2.82 ಲಕ್ಷ ರೂಪಾಯಿಯನ್ನು ಬಿಚ್ಚು ಜಂತಿಲ್ ಜಮಾ ಮಾಡಿದ್ದರು. `ವೀಸಾ ಬರಲು 3 ತಿಂಗಳು ಬೇಕು’ ಎಂದು ಸುಜಾತಾ ಅವರು ನಂಬಿಸಿದ್ದರು. ಆದರೆ, ಆ ಸಮಯ ಮೀರಿದರೂ ವೀಸಾ ಬಂದಿರಲಿಲ್ಲ.
ಈ ಬಗ್ಗೆ ಪ್ರಶ್ನಿಸಿದಾಗ 33 ಜನರಿಂದ ಹಣ ಸಂಗ್ರಹಿಸಿ ತಮ್ಮ ಖಾತೆಗೆ ಜಮಾ ಮಾಡುವಂತೆ ಸುಜಾತಾ ಅವರು ಹೇಳಿದ್ದು, ಅದರ ಪ್ರಕಾರ ಬಿಚ್ಚು ಜಂತಿಲ್ ಅವರು ಮತ್ತೆ ಹಣ ಜಮಾ ಮಾಡಿದ್ದರು. ನೌಷಾದ್ ಖ್ವಾಜಾ, ಸುಜಾತಾ ಜುಮ್ಮಿ ಹಾಗೂ ಜಾಫರ್ ಖಾತೆಗೆ ಸೇರಿ 52 ಲಕ್ಷ ರೂ ಜಮಾ ಮಾಡಿದರೂ ಆ 33 ಜನರಿಗೆ ಉದ್ಯೋಗ ಸಿಗಲಿಲ್ಲ. ಕೊನೆಗೆ ತಮ್ಮ ಜೊತೆ 33 ಜನರು ಮೋಸ ಹೋಗಿರುವುದನ್ನು ಅರಿತು ಬಿಚ್ಚು ಜಂತಿಲ್ ಅವರು ಪೊಲೀಸ್ ದೂರು ನೀಡಿದರು.
Discussion about this post