ಕುಮಟಾದ ಹುಬ್ಬಣಗೇರಿಯ ಬಾಡ ಗ್ರಾಮ ಪಂಚಾಯತವೂ ಶಾಲೆ, ಅಂಗನವಾಡಿಯಿರುವ ಸ್ಥಳದಲ್ಲಿ ಕಸದ ತೊಟ್ಟಿ ನಿರ್ಮಿಸಿದ ಬಗ್ಗೆ ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
`ಇಲ್ಲಿನ ಸಮಸ್ಯೆ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಲಾಗಿದೆ’ ಎಂದು ಕೇಂದ್ರದ ಅಧ್ಯಕ್ಷ ಆಗ್ನೆಲ್ ರೋಡ್ರಿಗಸ್ ಹೇಳಿದ್ದಾರೆ. `ಸಾರ್ವಜನಿಕರ ಮನೆ, ಅಂಗನವಾಡಿ ಹಾಗೂ ಶಾಲೆ ಇರುವ ಸ್ಥಳದಲ್ಲಿ ಪರದೆ ಕಟ್ಟಿ ಕಸ ಸಂಗ್ರಹಣೆ ಮಾಡಲಾಗುತ್ತಿದೆ. ಇದರಿಂದ ಶಾಲಾ ಮಕ್ಕಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಹಸಿ ಕಸಗಳನ್ನು ಅಲ್ಲಿ ಎಸೆಯುವುದರಿಂದ ಪ್ರದೇಶ ಗಬ್ಬಾಗಿದೆ’ ಎಂದು ಊರಿನವರು ವಿವರಿಸಿದರು.
`ಈ ಪ್ರದೇಶದಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ. ಶಾಲಾ ಮಕ್ಕಳನ್ನು ನಾಯಿಗಳು ಹೆದರಿಸುತ್ತಿವೆ. ಈ ಬಗ್ಗೆ ದೂರಿದರೂ ಕ್ರಮವಾಗಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು. `ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಕಸದ ತೊಟ್ಟಿಯನ್ನು ಸ್ಥಳಾಂತರಿಸಬೇಕು’ ಎಂದು ಅಲ್ಲಿನವರು ಆಗ್ರಹಿಸಿದರು.
`ಕಸದ ತೊಟ್ಟಿಯಿಂದ ಸಾಂಕ್ರಾಮಿಕ ರೋಗ ಬರುವ ಸಾಧ್ಯತೆ ಹೆಚ್ಚಿದ್ದು, ಅದನ್ನು ತಡೆಯಬೇಕು’ ಎಂದು ಒತ್ತಾಯಿಸಿದರು. ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ಸಂದೀಪ್ ಗೌಡ, ಗೀತಾ ನಾಯ್ಕ್, ನೀಲಾ, ರವಿ, ಹರಿಶ್ಚಂದ್ರ, ಎಮ್ ಜಿ ನಾಯ್ಕ್, ಶಾರದಾ ನಾಯ್ಕ್, ರವಿ ಪಟಗಾರ, ಶಂಕರ್ ಗೌಡ ಇತರರಿದ್ದರು.
Discussion about this post