ದಾಂಡೇಲಿ ಭಾಗದಲ್ಲಿ ಮೇವಿಗೆ ಬಿಟ್ಟ ಜಾನುವಾರುಗಳು ಆಗಾಗ ಕಾಣೆಯಾಗುತ್ತಿದ್ದು, ಅವು ಮೊಸಳೆಗೆ ಆಹಾರವಾಗುತ್ತಿರುವ ಸತ್ಯ ಇದೀಗ ಬಯಲಾಗಿದೆ.
ದಾಂಡೇಲಿಯ ಸಮೀಪದ ಹಾಲಮಡ್ಡಿಯ ಸೇತುವೆ ಅಡಿ ಐದಾರು ಮೊಸಳೆ ಸೇರಿ ಹಸುವನ್ನು ಭಕ್ಷಿಸುತ್ತಿರುವುದನ್ನು ಅಲ್ಲಿನ ಜನ ನೋಡಿದ್ದಾರೆ. ಜೊತೆಗೆ ಕೆಲವರು ಇದನ್ನು ತಮ್ಮ ಮೊಬೈಲಿನಲ್ಲಿ ಚಿತ್ರಿಕರಿಸಿದ್ದಾರೆ.
ಮೇವಿಗಾಗಿ ಹೊರಟ ಹಸುಗಳು ಬಾಯಾರಿಕೆ ತಣಿಸಿಕೊಳ್ಳಲು ನೀರಿನ ಕಡೆ ಸಾಗುತ್ತವೆ. ಇದನ್ನೇ ಕಾದು ಕುಳಿತ ಮೊಸಳೆಗಳು ಜಾನುವಾರುಗಳನ್ನು ಸಜೀವನವಾಗಿ ನೀರಿಗೆ ಎಳೆದು ಅಲ್ಲಿ ಭಕ್ಷಿಸುತ್ತಿವೆ.
ಭೂಮಿ ಮೇಲಿನ ಮಾಂಸದ ಋಚಿ ನೋಡಿದ ಮೊಸಳೆಗಳು ಇನ್ನಷ್ಟು ಅಪಾಯಕಾರಿಯಾಗಿದ್ದು, ಜನ ಆತಂಕವ್ಯಕ್ತಪಡಿಸಿದ್ದಾರೆ.
