ಪದ್ಮಶ್ರೀ ಸುಕ್ರಿ ಗೌಡ ಹಾಗೂ ತುಳಸಿ ಗೌಡರ ಸ್ಮರಣಾರ್ಥ ಮಂಗಳೂರಿನ ಸಹ್ಯಾದ್ರಿ ಸಂಜಯ ಸಂಸ್ಥೆ ವರ್ಷವಿಡೀ ಕಾರ್ಯಕ್ರಮ ಆಯೋಜಿಸುತ್ತಿದೆ. ಅಡವಿ ಮಕ್ಕಳ ವಿದ್ಯಾ ವಿಕಸನಕ್ಕಾಗಿ ನಡೆಸುವ ವನ ಚೇತನ ಜಿಲ್ಲೆಯ ವಿವಿಧ ಕಡೆ ಮುಂದುವರೆದಿದೆ.
ಅoಕೋಲಾದ ಹೊನ್ನಳ್ಳಿ ಶಾಲೆಯಲ್ಲಿ ವನ ಚೇತನ ತಂಡದಿoದ ಹಾಲಕ್ಕಿ ಜಾನಪದ ಹಾಡುಗಳ `ಹಾಲಕ್ಕಿ ಹಂದರ’ ಸಾಹಿತ್ಯ ಕೃತಿ ಬಿಡುಗಡೆ ಮಾಡಲಾಗಿದೆ. ತುಳಸಿ ಗೌಡರ ಪುತ್ರ ಸುಬ್ರಾಯ ಗೌಡ ಅವರು ಈ ಕೃತಿ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಹಾಲಕ್ಕಿ ಹಾಡುಗಳನ್ನು ಪ್ರಸ್ತುಪಡಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಜಾನಪದ ಹಾಡುಗಾರರಾದ ಲಕ್ಷ್ಮಿ ಗೌಡ ಮತ್ತು ಸೋಮಿ ಗೌಡ ಅವರು ಮಕ್ಕಳಿಗೆ ವಿವಿಧ ಹಾಡುಗಳನ್ನು ಕಲಿಸಿದರು. ಶಾಲಾ ಅಂಗಳದಲ್ಲಿ ಪದ್ಮಶ್ರೀ ತುಳಸಿ ಗೌಡರ ಸ್ಮರಣಾರ್ಥ ಗಿಡ ನೆಡಲಾಯಿತು.
ಹೊನ್ನಳ್ಳಿ ಗ್ರಾ ಪಂ ಸದಸ್ಯರಾದ ತುಳಸು ಗೌಡ, ಹೊನ್ನಳ್ಳಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಾದೇವ ಗೌಡ, ವನಚೇತನಾದ ಸಂಘಟಕ ಮತ್ತು ಹಾಲಕ್ಕಿ ಹಂದರ ಕೃತಿ ರಚಿಸಿದ ದಿನೇಶ್ ಹೊಳ್ಳ, ಸಾಮಾಜಿಕ ಕಾರ್ಯಕರ್ತರಾದ ಮಂಜುನಾಥ್ ಗೌಡ, ಶರಣ್ಯ ನಾಯ್ಕ ಇದ್ದರು.
