ಕುಮಟಾದ ಮಾಸೂರು ಕ್ರಾಸಿನಲ್ಲಿ ವಾಸಿಸುವ 80 ವರ್ಷದ ಭಿಕ್ಷುಕಿ ಪಾರ್ವತಿ ಅವರಿಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಆಹಾರದ ಕಿಟ್ ನೀಡಿ ನೆರವಾಗಿದ್ದಾರೆ.
ಗೌರಿ ಗಣೇಶ ಹಬ್ಬದ ಹಿನ್ನಲೆ ಪಾರ್ವತಿ ಅವರಿಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದಿAದ ಈ ಉಡುಗರೆ ನೀಡಲಾಗಿದೆ. `ಪತಿಯ ಅನಾರೋಗ್ಯ, ಪುತ್ರನ ಮರಣದ ವೇಳೆಯಲ್ಲಿಯೂ ಈ ಕೇಂದ್ರದಿAದ ನೆರವು ಸಿಕ್ಕಿತ್ತು. ಸರ್ಕಾರಿ ಸೌಲಭ್ಯ ಇಲ್ಲದ ನಮಗೆ ಕೇಂದ್ರದವರು ಸರ್ಕಾರಿ ಸೌಲಭ್ಯ ಕೊಡಿಸಿ ಸಹಾಯ ಮಾಡಿದ್ದಾರೆ’ ಎಂದು ಪಾರ್ವತಿ ಅವರು ಈ ವೇಳೆ ಸ್ಮರಿಸಿದರು.
`ಸಮಾಜ ಸೇವೆ ಮಾಡುವ ಜನರಿಗೆ ದೇವರು ಒಳ್ಳೆಯದನ್ನು ಮಾಡಲಿ. ನಿರ್ಗತಿಕರ ಆರೋಗ್ಯ ವಿಚಾರಿಸುವವರಿಗೆ ಇನ್ನಷ್ಟು ಬಲ ಬರಲಿ’ ಎಂದವರು ಹಾರೈಸಿದರು. ಕೇಂದ್ರ ದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್, ಸಾಮಾಜಿಕ ಕಾರ್ಯಕರ್ತ ಸುಧಾಕರ್ ನಾಯ್ಕ ಹಾಗೂ ಬಾಳ ನಾಯ್ಕ ಸೇರಿ ಅಲ್ಲಿದ್ದವರ ಆರೋಗ್ಯ ವಿಚಾರಿಸಿದರು.
Discussion about this post