ಕಾರವಾರದ ಮಂಜೇಶ್ವರ ಗೌಡ ಅವರು ಮೀನು ಹಿಡಿಯಲು ಬೈತಖೋಲ್ ಬಳಿ ಹೋದಾಗ ಅಪರಿಚಿತ ಶವ ಸಿಕ್ಕಿದ್ದು, ಅದನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.
ದೇವಳಮಕ್ಕಿಯ ಮಂಜೇಶ್ವರ ಗೌಡ ಅವರು ಅಗಸ್ಟ 24ರಂದು ಬೈತಕೋಲ್’ಗೆ ಹೋಗಿದ್ದರು. ಕಾಮತ್ ಬೇ ಬೀಚ್ ಬಳಿ ತಲುಪಿದಾಗ ಅವರಿಗೆ ಸಮುದ್ರದಲ್ಲಿ ಏನೋ ತೇಲಾಡುವುದು ಕಾಣಿಸಿತು. ಸಮೀಪದಿಂದ ನೋಡಿದಾಗ ಅದು ಶವ ಎಂದು ಅರಿವಿಗೆ ಬಂದಿತು.
ಕೂಡಲೇ ಮಂಜೇಶ್ವರ ಗೌಡ ಅವರು ಪೊಲೀಸರಿಗೆ ಫೋನ್ ಮಾಡಿದರು. ಪೊಲೀಸರ ಜೊತೆಗೂಡಿ ಆ ಶವವನ್ನು ದಡಕ್ಕೆ ತಂದರು. ಆ ಶವ ಸಂಪೂರ್ಣ ಕೊಳೆತಿದ್ದು, ಗುರುತು-ಪರಿಚಯ ಸಿಗುವ ಹಾಗಿರಲಿಲ್ಲ. ಅದಾಗಿಯೂ ಆಂಬುಲೆನ್ಸ ಮೂಲಕ ಶವವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.
ಸದ್ಯ ಶವವನ್ನು ಶವಾಗಾರದಲ್ಲಿರಿಸಲಾಗಿದ್ದು, ವಾರಸುದಾರರಿಗೆ ಹುಡುಕಾಟ ನಡೆದಿದೆ. ಪುರುಷನ ಶವ ಎಂದು ಮಾತ್ರ ಗೊತ್ತಾಗಿದೆ. ಕಾರವಾರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
