ಕಾಲೇಜು ವಿದ್ಯಾರ್ಥಿನಿಯೊಬ್ಬರನ್ನು ಸರಸಕ್ಕೆ ಕರೆದ ಉಪನ್ಯಾಸಕನಿಗೆ ಶಿರಸಿಯ ಜನ ಹಿಗ್ಗಾಮುಗ್ಗ ಥಳಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. `ತಾನು ತಪ್ಪು ಮಾಡಿಲ್ಲ’ ಎಂದು ಉಪನ್ಯಾಸಕ ಹೇಳಿದರೂ, ಮೆಸೆಜ್ ಮಾಡಿದ ದಾಖಲೆ ನೋಡಿ ಜನ ಕಠಿಣ ಕ್ರಮ ಜರುಗಿಸಿದ್ದಾರೆ.
ಶಿರಸಿ ಕೊಳಗಿಬೀಸ್ ಕಾಲೇಜಿನ ಆದರ್ಶ ಕೆಲಸ ಮಾಡುವ ಆದರ್ಶ ಎಂ¨ ಉಪನ್ಯಾಸಕರು ಅದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬರಿಗೆ ಕೆಲ ದಿನಗಳಿಂದ ಪೀಡಿಸುತ್ತಿದ್ದರು. ವಿದ್ಯಾರ್ಥಿನಿಯ ಮೊಬೈಲಿಗೆ ಕೆಟ್ಟ ಕೆಟ್ಟ ಮೆಸೆಜ್ ಕಳುಹಿಸುತ್ತಿದ್ದರು. ವಿದ್ಯಾರ್ಥಿನಿ ಭಯದಿಂದ ಈ ವಿಷಯವನ್ನು ಮೊದಲು ಯಾರ ಬಳಿಯೂ ಹೇಳಿರಲಿಲ್ಲ.
ಅದನ್ನೇ ಬಂಡವಾಳವನ್ನಾಗಿಸಿಕೊoಡ ಉಪನ್ಯಾಸಕ ಆದರ್ಶ ಮತ್ತೆ ಮತ್ತೆ ಮೆಸೆಜ್ ಮಾಡಲು ಶುರು ಮಾಡಿದ್ದು, ಈ ದಿನ `ನನ್ನ ರೂಮಿಗೆ ಬಾ’ ಎಂದು ಕರೆದಿದ್ದರು. ಈ ಉಪನ್ಯಾಸಕ ಮಾಡಿದ ವೈಸ್ ಮೆಸೆಜ್ ವೈರಲ್ ಆಗಿದ್ದು, ಜನ ರೊಚ್ಚಿಗೆದ್ದರು. ನೂರಾರು ಜನ ಕಾಲೇಜಿನ ಬಳಿ ಜಮಾಯಿಸಿ ಉಪನ್ಯಾಸಕನನ್ನು ತರಾಟೆಗೆ ತೆಗೆದುಕೊಂಡರು.
`ತಾನೂ ತಪ್ಪು ಮಾಡಿಲ್ಲ. ರೂಮಿಗೆ ಕರೆದಿಲ್ಲ’ ಎಂದು ಉಪನ್ಯಾಸಕ ಹೇಳಿದಾಗ ಅಲ್ಲಿದ್ದವರು ಆತ ಮಾತನಾಡಿದ ಆಡಿಯೋ ಕೇಳಿಸಿದರು. ಸಂತ್ರಸ್ತ ವಿದ್ಯಾರ್ಥಿನಿಯನ್ನು ಸ್ಥಳಕ್ಕೆ ಕರೆಯಿಸಿ ಆಕೆಯ ಹೇಳಿಕೆಪಡೆದರು. ಅದಾಗಿಯೂ, ಉಪನ್ಯಾಸಕ ಕ್ಷಮೆ ಕೋರದ ಕಾರಣ ಎಲ್ಲರೂ ಸೇರಿ ಉಪನ್ಯಾಸಕನಿಗೆ ಥಳಿಸಿದರು. ಕೊನೆಗೆ ಉಪನ್ಯಾಸಕನನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ವಿಚಾರಣೆ ನಡೆದಿದೆ.
Discussion about this post