ಅಂಕೋಲಾ ಪುರಸಭೆ ಬಳಿ ಸೂಟ್ಕೆಸ್ ಸಿಕ್ಕಿದ್ದು, ಅದರೊಳಗೆ ಬಾಂಬ್ವಿರಬಹುದು ಎಂದು ಜನ ಅನುಮಾನಿಸಿದರು. ಈ ಹಿನ್ನಲೆ ಜನ ಆತಂಕಕ್ಕೆ ಒಳಗಾದ ವಿಷಯ ಅರಿತು ಕಾರವಾರದ ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯದಳದವರು ಆಗಮಿಸಿ ಜನರ ಭಯ ದೂರ ಮಾಡಿದರು.
ರಾಜ್ ಕಟ್ಟಡದ ಬಳಿ ಮಂಗಳವಾರ ಸೂಟ್ಕೆಸ್ವೊಂದು ಕಾಣಿಸಿತು. ಆ ಸೂಟ್ಕೇಸ್’ಗೆ ಯಾರು ವಾರಸುದಾರರು ಇರಲಿಲ್ಲ. ಹೀಗಾಗಿ ಜನ ಸಹಜವಾಗಿ ಆತಂಕಕ್ಕೆ ಒಳಗಾದರು. ಸೂಟ್ಕೇಸ್ ಸಮೀಪ ತೆರಳಲು ಭಯಪಟ್ಟರು. ಕೊನೆಗೆ ಅಲ್ಲಿದ್ದ ಒಬ್ಬರು ಧೈರ್ಯ ಮಾಡಿ ಪೊಲೀಸರಿಗೆ ಫೋನ್ ಮಾಡಿದರು.
ಪೊಲೀಸರು ಮುನ್ನಚ್ಚರಿಕಾ ಕ್ರಮವಾಗಿ ಶ್ವಾನದಳವನ್ನು ಕರೆಯಿಸಿದರು. ಅವರ ಜೊತೆ ಬಾಂಬ್ ನಿಷ್ಕ್ರಿಯದಳದವರು ಆಗಮಿಸಿದರು. ಸಾರ್ವಜನಿಕರು ಸಮೀಪ ಬರದಂತೆ ಪೊಲೀಸರು ತಡೆದರು. ಅಲ್ಲಿರುವ ಗಣೇಶ ಮಂಟಪ ಹಾಗೂ ಸುತ್ತಲಿನ ಪ್ರದೇಶದಲ್ಲಿ ಪೊಲೀಸರು ಶೋಧ ನಡೆಸಿದರು.
ಅದಾದ ನಂತರ ಅತ್ಯಂತ ಮುನ್ನಚ್ಚರಿಕೆವಹಿಸಿ ಸೂಟ್ಕೆಸ್ ತೆರೆದು ನೋಡಲಾಗಿದ್ದು, ಅದರಲ್ಲಿ ಕೆಲ ಬಟ್ಟೆಗಳಿದ್ದವು. ಜೊತೆಗೆ ದಿನ ಬಳಕೆ ವಸ್ತುಗಳಿದ್ದವು. ಒಂದಷ್ಟು ಔಷಧಿಗಳು ಕಾಣಿಸಿದವು. ಅದನ್ನು ನೋಡಿದ ಜನ ನಿರಾಳರಾದರು.
Discussion about this post