ಮೇಷ ರಾಶಿ: ಸ್ನೇಹ ಬಲವಾಗಲಿದೆ. ಸಮಾಧಾನಕರ ಮಾತು ಸಂತಸ ಕೊಡಲಿದೆ. ಧೈರ್ಯದಿಂದ ಕೆಲಸ ಮಾಡಿದರೆ ಯಶಸ್ಸು ಸಿಗಲಿದೆ.
ವೃಷಭ ರಾಶಿ: ನಿಮ್ಮ ಆರೋಗ್ಯದ ಕಡೆ ಗಮನಕೊಡುವುದು ಅನಿವಾರ್ಯ. ಸಣ್ಣ ವಿರಾಮ ನಿಮಗೆ ಶಕ್ತಿ ಕೊಡಲಿದೆ. ಉತ್ತಮ ಆಹಾರ ಸೇವಿಸಿ.
ಮಿಥುನ ರಾಶಿ: ಮನಸ್ಸಿನ ಶಾಂತಿಗಾಗಿ ಒಳ್ಳೆಯ ಕೆಲಸ ಮಾಡಿ. ಬೇರೆಯವರಿಗೆ ಉಪಕಾರ ಮಾಡಿ. ಓದು ನಿಮಗೆ ಜ್ಞಾನ ಕೊಡುತ್ತದೆ.
ಕರ್ಕ ರಾಶಿ: ಪ್ರೀತಿಪಾತ್ರರ ಜೊತೆ ಸರಿಯಾಗಿ ಮಾತನಾಡಿ. ವಿನಯ ಹಾಗೂ ಕೃತಜ್ಞತೆಯಿಂದ ವರ್ತಿಸುವುದು ಉತ್ತಮ.
ಸಿಂಹ ರಾಶಿ: ಹೊಸ ಕಲಿಕೆಗೆ ನಿಮ್ಮ ಮನಸ್ಸು ಹಾತೊರೆಯಲಿದೆ. ಧೈರ್ಯದಿಂ ಕೆಲಸ ಮಾಡಿ. ಚಟುವಟಿಕೆಯಿಂದ ಇರಿ.
ಕನ್ಯಾ ರಾಶಿ: ಕೆಲಸದಲ್ಲಿ ಶ್ರದ್ಧೆ ಇದ್ದರೆ ಅದು ಫಲ ಕೊಡಲಿದೆ. ನಿರಂತರ ಪ್ರಯತ್ನ ಬಿಡಬೇಡಿ.
ತುಲಾ ರಾಶಿ: ನಿಮ್ಮೊಳಗಿನ ಬುದ್ಧಿಶಕ್ತಿಯನ್ನು ಉಪಯೋಗಿಸಿ ಕೆಲಸ ಮಾಡಿ. ಆಳವಾಗಿ ಚಿಂತಿಸಿ ಯೋಜನೆಯನ್ನು ಕಾರ್ಯರೂಪಕ್ಕೆ ತನ್ನಿ. ಸೌಜನ್ಯದಿಂದ ವರ್ತಿಸಿ.
ವೃಶ್ಚಿಕ ರಾಶಿ: ಮನಸ್ಸಿನಲ್ಲಿರುವ ಗೊಂದಲಗಳ ಬಗ್ಗೆ ನಿಧಾನವಾಗಿ ಯೋಚಿಸಿ. ಧ್ಯಾನ ಮಾಡಿ ಅದರ ಪ್ರಯೋಜನ ಪಡೆಯಿರಿ. ಮಾನಸಿಕ ಶಾಂತಿಗಾಗಿ ದೇವಾಲಯಕ್ಕೆ ಭೇಟಿ ನೀಡಿ.
ಧನು ರಾಶಿ: ಹೊಸ ವಿಚಾರಗಳು ನಿಮ್ಮ ಮನಸ್ಸು ಆವರಿಸಲಿದೆ. ಅದು ಪ್ರಗತಿಗೆ ದಾರಿ ಆಗಲಿದೆ. ಕಲಿಕೆ ಶುರು ಮಾಡಲು ಯೋಗ್ಯ ಸಮಯ.
ಮಕರ ರಾಶಿ: ಪರಿಶೀಲನೆ, ಶೋಧ ಕೆಲಸದಲ್ಲಿ ತೊಡಗಿಸಿಕೊಳ್ಳಿ. ಜಾಗೃತಿ ಕೆಲಸಗಳಿಗೆ ಆದ್ಯತೆ ಕೊಡಿ. ಹಣಕಾಸು ಹೂಡಿಕೆಗೆ ಈ ದಿನ ಸೂಕ್ತವಲ್ಲ.
ಕುಂಭ ರಾಶಿ: ನಿಮ್ಮೊಳಗಿನ ಕೌಶಲ್ಯ ನಿಮ್ಮ ಕೆಲಸಕ್ಕೆ ಸಹಕಾರಿ. ಸಣ್ಣ ಕಾರ್ಯಗಳನ್ನು ಗಮನವಿಟ್ಟು ಮಾಡಿ. ಜಾಣ್ಮೆಯಿಂದ ವರ್ತಿಸಿ.
ಮೀನ ರಾಶಿ: ಈ ದಿನ ನಿಮಗೆ ವಿಶ್ರಾಂತಿ ಅಗತ್ಯ. ಆಗದ ಕೆಲಸ ಮಾಡುವ ದುಸ್ಸಾಹಸಕ್ಕೆ ಹೋಗಬೇಡಿ. ಅಧ್ಯಯನಕ್ಕಾಗಿ ಸಮಯ ಮೀಸಲಿಡಿ.
Discussion about this post